ಪೇಟೆಯ ಕಸತ್ಯಾಜ್ಯ ರೈತರ ಕೃಷಿ ಭೂಮಿಗೆ.! ಸಮಸ್ಯೆ ಪರಿಹರಿಸಿ ಎಂದ ಗ್ರಾಮಸ್ಥರು.!

ಯಲ್ಲಾಪುರ: ಪಟ್ಟಣ ಪಂಚಾಯತ ವ್ಯಾಪ್ತಿಯ ರಾಮಾಪುರದ ಕೃಷಿ ಜಮೀನಿಗೆ ಜೋರಾಗಿ ಮಳೆಯಾದಾಗ
ಹಳ್ಳದ ನೀರು ತುಂಬಿ ನಾಟಿ ಮಾಡಿದ ಭತ್ತದ ಗದ್ದೆಯಲ್ಲಿ ಪ್ಲಾಸ್ಟಿಕ್ ಬಾಟಲಿ ಕಸಕಡ್ಡಿಗಳು ಬಂದು ಬೀಳುತ್ತಿದ್ದು, ರೈತರು ಸಮಸ್ಯೆ ಅನುಭವಿಸುವಂತಾಗಿದೆ.

ಹಳ್ಳ ಒತ್ತುವರಿ ಆಗಿರುವುದರಿಂದ ಮಳೆ ಬಂದಾಗ ಹಳ್ಳದ ನೀರು ತುಂಬಿ ಕೃಷಿ ಜಮೀನಿಗೆ ಪೇಟೆಯ ಕಸತ್ಯಾಜ್ಯ ಬಂದು ಬೀಳುತ್ತಿದೆ ಎಂದು ಸ್ಥಳಿಯರಾದ ಶ್ರೀನಿವಾಸ ಪಾಟೀಲ್ ವಿನೋದ ಪಾಟೀಲ, ಅಣ್ಣಪ್ಪ ಪಾಟೀಲ್, ಶಂಕರ ಜಿ ಪಾಟೀಲ್  ದೂರಿದ್ದಾರೆ.

ಕಾಳಮ್ಮನಗರ ಮತ್ತು ಉದ್ಯಮನಗರದ ಕಸಗಳು ರಾಮಾಪುರ ಹಳ್ಳಕ್ಕೆ ಸೇರದಂತೆ ವ್ಯವಸ್ಥೆ ಕಲ್ಪಿಸಿ, ಹಳ್ಳದ ಒತ್ತುವರಿ ಮಾಡಿರುವದನ್ನು ತೆರವುಗೊಳಿಸಿ ಹಳ್ಳದ ನೀರು ಸರಾಗವಾಗಿ ಹೋಗುಂತೆ ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಈ ಬಗ್ಗೆ ಪಟ್ಟಣ ಪಂಚಾಯತಕ್ಕೆ ಹಲವು ಬಾರಿ ಮನವಿ ನೀಡಿದರೂ ಸಮಸ್ಯೆ ಪರಿಹಾರವಾಗದ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.