ಸಮಾಜ ನೀಡಿದ ಗೌರವ, ಹಿರಿಮೆ ಕಾಯ್ದುಕೊಂಡು ಸಾಮಾಜಿಕ‌ ಪರಿವರ್ತನೆಗೆ ಶಿಕ್ಷಕರು ಶ್ರಮಿಸಬೇಕು – ಸಚಿವ ಶಿವರಾಮ ಹೆಬ್ಬಾರ್

ಯಲ್ಲಾಪುರ: ಉತ್ತಮ ಸಮಾಜದ ನಿರ್ಮಾಣದಲ್ಲಿ ಗುರುವಿನ ಸ್ಥಾನ ಹಿರಿದಾಗಿದೆ. ಗುರುವಿಗೆ ಸಮಾಜದಲ್ಲಿ ವಿಶೇಷ ಗೌರವ ಸ್ಥಾನಮಾನ ಇದ್ದು, ಸಮಾಜ ನೀಡಿದ ಗೌರವ ಹಿರಿಮೆ ಕಾಯ್ದುಕೊಂಡು ಸಾಮಾಜಿಕ‌ ಪರಿವರ್ತನೆಗೆ ಶೃಮಿಸಬೇಕು ಎಂದು ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಅವರು ಸೋಮವಾರ ಪಟ್ಟಣದ ವೆಂಕಟ್ರಮಣ ಮಠ ಸಭಾಭವನದಲ್ಲಿ ನಡೆದಲ್ಲಿ ನಡೆದ ತಾಲೂಕಾ ಮಟ್ಟದ ಶಿಕಕ್ಷ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಲ್ಲಾ ಕಾಲದಲ್ಲೂ ಗುರುವಿಗೆ ಶ್ರೇಷ್ಠತೆಯ ಗೌರವಾದರಗಳು ಇದೆ. ಎಲ್ಲಾ ವೃತ್ತಿಗಿಂತ ಶಿಕ್ಷಕ ವೃತ್ತಿ ಭಿನ್ನವಾಗಿದೆ. ವೃತ್ತಿಯ ಹಿರಿಮೆಯಿಂದ ಸಾಮಾಹಿಕ ಮೌಲ್ಯ ಎತ್ತರಿಸಬೇಕು ಎಂದರು. ಇದೇ ಸಂದರ್ಭದಲ್ಲಿ ತಾಲೂಕಾ ಶಿಕ್ಷಕ ಪ್ರಶಸ್ತಿ ಪಡೆದ ಗಣಪತಿ ಕೃಷ್ಣ ಭಟ್ಟ, ಸಂತೋಷ ಹೊನ್ನಪ್ಪ, ಪಾರ್ವತಿ ನಾಯ್ಕ, ದೇವಿದಾಸ ನಾರಾಯಣ ಪಟಗಾರ ಹಾಗೂ ವಿನಾಯಕ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು.
ಶಿಕ್ಷಕರಿಗಾಗಿ ನಡೆದ ವಿವಿಧ ಸ್ಪರ್ಧೆಯ ವಿಜೇತ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ವಿಕೇಂದ್ರಿಕರಣ ಮತ್ತು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಪ.ಪಂ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಲಿ ಪಾಟಣಕರ್, ತಾ.ಪಂ.ಇಒ ಜಗದೀಶ ಕಮ್ಮಾರ, ಬಿಇಒ ಎನ್.ಆರ್.ಹೆಗಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷ ಆರ್.ಆರ್.ಭಟ್ಟ ಮತ್ತಿತರು ಉಪಸ್ಥಿತರಿದ್ದರು.