ಬೆಂಗಳೂರು: ‘ಬಸವ ಭೂಷಣ’ ಪ್ರಶಸ್ತಿ ವಾಪಸ್ ನೀಡುವಂತೆ ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ಸಿಎಂಗೆ ಪತ್ರ ಬರೆದಿದ್ದಾರೆ. ಬಸವರಾಜ ಬೊಮ್ಮಾಯಿ ಮುರುಘಾಶ್ರೀ ಗಳಿಂದ ಬಸವ ಭೂಷಣ ಪ್ರಶಸ್ತಿ ಪಡೆದಿದ್ದರು. ಮುರುಘಾ ಶ್ರೀ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದ್ದರಿಂದ ಪ್ರಶಸ್ತಿ ವಾಪಸ್ ನೀಡುವಂತೆ ಪತ್ರ ಬರೆದು ವೆಂಕಟೇಶ್ ಆಗ್ರಹಿಸಿದ್ದಾರೆ.
ಈಗಾಗಲೇ ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ಬಸವಶ್ರೀ ಪ್ರಶಸ್ತಿ ವಾಪಸ್ ನೀಡುವುದಾಗಿ ಘೋಷಿಸಿದ್ದಾರೆ. ಅದೇ ರೀತಿ ಸಿಎಂ ಕೂಡ ಪ್ರಶಸ್ತಿ ವಾಪಸ್ ನೀಡಿ, ತನಿಖೆ ಮಾಡುತ್ತಿರುವ ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡಬೇಕು. ಮುರುಘಾಶ್ರೀ ಗಳಿಂದ ಪ್ರಶಸ್ತಿ ಪಡೆದ ಅಧಿಕಾರಿಗಳೂ ಪ್ರಶಸ್ತಿ ಹಿಂದಕ್ಕೆನೀಡುವಂತೆ ಸುತ್ತೋಲೆ ಹೊರಡಿಸಿ ಎಂದು ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ಸಿಎಂಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.