ಹಣಕ್ಕಾಗಿ ತಾಯಿಯ ಮೇಲೇ ಹಲ್ಲೆ ಮಾಡಿದ ಪಾಪಿ ಮಗ.! ಕುತ್ತಿಗೆಗೆ ಗಾಯವಾಗಿ ಆಸ್ಪತ್ರೆ ಸೇರಿದ ತಾಯಿ.!

ಮುಂಡಗೋಡ: ಮಗನೊಬ್ಬ ತಾಯಿಗೆ ಕುಡಗೋಲಿನಿಂದ ಹಲ್ಲೆ ಮಾಡಿದ ಘಟನೆ ತಾಲೂಕಿನ ಹುನಗುಂದ ಗ್ರಾಮದಲ್ಲಿ ಗುರುವಾರ ರಾತ್ರಿ ಜರುಗಿದೆ. ಸಲೀಂ ಹಲ್ಲೆ ಮಾಡಿದ ಆರೋಪಿ. ಜುಬೇದಾ ಗೌಸುಸಾಬ್ ಹಲ್ಲೆಗೊಳಗಾದ ಮಹಿಳೆ. ಆರೋಪಿತ ತನ್ನ ತಾಯಿಯ ಜೊತೆ ಹಣಕ್ಕಾಗಿ ಪೀಡಿಸಿ ಅವಾಚ್ಯ ಶಬ್ದಗಳಿಂದ ಬೈದು ಕುಡಗೋಲಿನಿಂದ ಹಲ್ಲೆ ಮಾಡಿದ್ದಾನೆ.

ಈತನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ತಂದೆ ಗೌಸು ಸಾಬ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ವಹಿಸಿದ್ದಾರೆ. ಮಗನಿಂದ ಹಲ್ಲೆಗೊಳಗಾದ ಜುಬೇದಾಳಿಗೆ ಕುತ್ತಿಗೆಗೆ ಬಲವಾದ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.