ಬೀಜೋತ್ಪಾದನೆಗೆ ಬೆಳೆದ ತರಕಾರಿ ನೀರುಪಾಲು: ಮಳೆ ಅಬ್ಬರಕ್ಕೆ ಹೈರಾಣಾದ ರೈತ.!

ಗದಗ: ಮಳೆ ಅಬ್ಬರಕ್ಕೆ ಜಿಲ್ಲೆಯ ರೈತರು ಹೈರಾಣಾಗಿದ್ದಾರೆ. ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದ ಬೀಜೋತ್ಪಾದನೆಗೆ ಬೆಳೆದ ಸೌತೆಕಾಯಿ ನೀರುಪಾಲಾದ ಘಟನೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೊರ್ಲಹಳ್ಳಿ ಗ್ರಾಮದ ರೈತ ವೀರಣ್ಣ ಮಜ್ಜಗಿ ಬೀಜೋತ್ಪಾದನೆಗೆ ಸೌತೆಕಾಯಿ ಹಾಗೂ ಬೆಂಡೆಕಾಯಿಯನ್ನು ಬೆಳೆದಿದ್ದರು. ಆದರೆ ದುದೃಷ್ಟವಶಾತ್ ಇಡೀ ಹೊಲದ ತುಂಬೆಲ್ಲಾ ನೀರು ತುಂಬಿ ಬೆಳೆ ನೀರುಪಾಲಾಗಿದ್ದು ರೈತ ಕಂಗಾಲಾಗಿದ್ದಾನೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೀಜೋತ್ಪಾದನೆ ಮಾಡಿದ್ದ ರೈತನ ಗೋಳಾಟ ಯಾರೂ ಕೇಳದಂತಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.