ಹಶೀಶ್ ಆಯಿಲ್ ಮಾರಾಟ ಜಾಲ ಬಯಲಿಗೆ

ಕೊಡಗು: ಹಶೀಶ್ ಆಯಿಲ್ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಮೂವರು ಆರೋಪಿಗಳ‌ನ್ನು ಭಾಗಮಂಡಲ ಸಮೀಪ ಬಂಧನ ಮಾಡಲಾಗಿದೆ. ಅಹ್ಮದ್ ಕಬೀರ್ (37), ಅಬ್ದುಲ್ ಖಾದರ್ (27), ಮಹಮ್ಮದ್ ಮುಜಾಬಿಲ್ (22) ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 10 ಲಕ್ಷ ಮೌಲ್ಯದ 1.116 ಗ್ರಾಂ ಹಶೀಶ್ ಆಯಿಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಭಾಗಮಂಡಲ‌ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕಾರಿನ ತಪಾಸಣೆ ನಡೆಸುವಾಗ ವಾಹನದ ವಿವಿಧ ನಂಬರ್ ಪ್ಲೇಟ್ ಗಳು ಸಿಕ್ಕಿದ್ದು ಕಾರಿನ ಡಿಕ್ಕಿಯಲ್ಲಿದ್ದ ಪ್ಲಾಸ್ಟಿಕ್ ಬಾಟಲಿಯಲ್ಲಿ ಹಶೀಶ್ ಆಯಿಲ್ ಪತ್ತೆಯಾಗಿದೆ.

ಇನ್ನು ಬಂಧಿತರೆಲ್ಲರೂ ಕೇರಳ ಮೂಲದ‌ ಆರೋಪಿಗಳು ಎಂದು ತಿಳಿದುಬಂದಿದೆ. ಆಂಧ್ರಪ್ರದೇಶದ ಗುಂಟೂರಿನಿಂದ ಮಾದಕ ದ್ರವ್ಯ ತಂದಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಇನ್ನು ಕಾರ್ಯಾಚರಣೆ ಬಗ್ಗೆ ಎಸ್ಪಿ ಕ್ಯಾ. ಎಂ‌ ಅಯ್ಯಪ್ಪ ಮಾಹಿತಿ‌ ನೀಡಿದ್ದಾರೆ. ಆರೋಪಿ ಅಹ್ಮದ್ ವಾಹನ ಕಳ್ಳತನ, ರಾಬರಿ, ಹನಿಟ್ರ್ಯಾಪ್ ನಲ್ಲಿ ಸಕ್ರಿಯನಾಗಿದ್ದಾನೆ ಎಂದು ತಿಳಿಸಿದ್ದಾರೆ.