ಸೆ. 3 ಮತ್ತು 4 ರಂದು ದಸರಾ ಕ್ರೀಡಾಕೂಟ

ಯಲ್ಲಾಪುರ: ಜಿಲ್ಲಾ ಯುವ ಸಬಲೀಕರಣ ಕ್ರೀಡಾ ಇಲಾಖೆ, ಜಿ.ಪಂ, ಪ.ಪಂ ಹಾಗೂ ತಾಲೂಕಾ ಯುವ ಒಕ್ಕೂಟದ ಆಶ್ರಯದಲ್ಲಿ ಸೆ.3 ಮತ್ತು 4 ರಂದು ದಸರಾ ಕ್ರೀಡಾಕೂಟ ನಡೆಯಲಿದೆ ಎಂದು ಯುವ ಜನಸೇವಾ ಕ್ರೀಡಾಧಿಕಾರಿ ನಾರಾಯಣ ನಾಯಕ ತಿಳಿಸಿದ್ದಾರೆ.

ಅವರು ಮಂಗಳವಾರ ಈ ಕುರಿತು ಮಾಹಿತಿ ನೀಡಿ, ದಸರಾ ಕ್ರೀಡಾಕೂಟದಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಖೋಖೋ, ಕಬ್ಬಡ್ಡಿ, ವಾಲಿಬಾಲ್, ಥ್ರೋಬಾಲ್, ಬ್ಯಾಡಮಿಂಟನ್, ಖೋಖೋ ಸ್ಪರ್ಧೆಗಳು ನಡೆಯಲಿದೆ. ಪುರುಷರಿಗೆ ಪುಟ್ ಬಾಲ್ ಸ್ಪರ್ಧೆ ನಡೆಯಲಿದೆ.

ಅಥ್ಲೆಟಿಕ್ಸ್ ನಲ್ಲಿ ಪುರುಷರಿಗೆ 100, 200, 400, 800, 1500, 5000 ಮೀ. ಓಟ, ಎತ್ತರ ಜಿಗಿತ, ಉದ್ದ ಜಿಗಿತ, ಚಕ್ರ ಎಸೆತ, ಜಾವಲಿನ್ ಥ್ರೋ, ರಿಲೇ, ಹರ್ಡಲ್ಸ್ ನಡೆಯಲಿದೆ.
ಮಹಿಳೆಯರಿಗೆ 200, 400, 800, 1500 ಮೀ ಓಟ, ಉದ್ದ ಜಿಗಿತ, ತ್ರಿವಿಧ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, ಜಾವಲಿನ್, ರಿಲೇ, ಹರ್ಡಲ್ಸ್ ಸ್ಪರ್ಧೆಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.