ಮೀನುಗಾರಿಕೆಗೆ ತೆರಳಿದ ದೋಣಿ ಮುಳುಗಡೆ.! ಓರ್ವ ನಾಪತ್ತೆ, ಇಬ್ಬರ ರಕ್ಷಣೆ.!

ಭಟ್ಕಳ: ಮೀನುಗಾರಿಕೆ ತೆರಳಿದ ದೋಣಿಯೊಂದು ಅಲೆಯ ಹೊಡೆತಕ್ಕೆ ಮುಳುಗಡೆಯಾಗಿರುವ ಘಟನೆ ಜಾಲಿಯಲ್ಲಿ ನಡೆದಿದೆ.

ಘಟನೆಯಲ್ಲಿ ಓರ್ವ ಮೀನುಗಾರ ನಾಪತ್ತೆಯಾಗಿದ್ದು, ಇಬ್ಬರು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಜಾಲಿ ನಿವಾಸಿ ನಾಗರಾಜ ರಾಮಕೃಷ್ಣ ಮೊಗೇರ ನಾಪತ್ತೆಯಾದ ಮೀನುಗಾರ. ವಿಕ್ಟರ್ ರಾಜ ಹಾಗೂ ಪುರುಷೋತ್ತಮ ಮೊಗೇರ ಮುಳುಗಡೆಯಾದ ದೋಣಿಯಿಂದಲೇ ರಕ್ಷಣೆ ಮಾಡಿಕೊಂಡು ದಡ ಸೇರಿದ್ದಾರೆ. ಈ ಮೂವರು ಸೋಮವಾರ ಮೀನುಗಾರಿಕೆಗೆ ತೆರಳಿದ ವೇಳೆ ಅಲೆಯ ಹೊಡೆತಕ್ಕೆ ದೋಣಿ ಮುಳುಗಡೆಯಾಗಿದೆ.

ಸದ್ಯ ರಕ್ಷಣೆಯಾದವರು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಪತ್ತೆಯಾದವನಿಗಾಗಿ ಬೋಟ್ ಗಳ ಮೂಲಕ ಸ್ಥಳೀಯರು ಶೋಧಕಾರ್ಯ ನಡೆಸುತ್ತಿದ್ದಾರೆ.