ಸಿದ್ದಾಪುರ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಬಂಧಿಸುವಲ್ಲಿ ಶುಕ್ರವಾರ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವಾಗ ಸಿದ್ದಾಪುರ ಪೊಲೀಸರು ದಾಳಿ ನಡೆಸಿ ಕಾನಸೂರಿನ ಗಣೇಶನಗರದ ಅಶೋಕ ನಾಯ್ಕ ಹಾಗೂ ಸಾಯಿರಾಮ ಬೈಲೂರ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. 140 ಹೈವರ್ಡ್ಸ್ ಪೌಚ್ ಜಪ್ತಿಪಡಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿಶೇಷ ವಿಭಾಗದ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಮದ್ಯ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.
ಅನಂತ ನಾಯ್ಕ ಘಟಿಕೈ ಹಾಗೂ ದಿನೇಶ ವೈಕುಂಠ ನಿಲೇಕಣಿ ಬಂಧಿತ ಆರೋಪಿಗಳು. ಕಾನಸೂರಿನ ಅಂಗಡಿಯೊಂದರಲ್ಲಿ ಮದ್ಯ ಮಾರುತ್ತಿರುವಾಗ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ. 160 ಪ್ಯಾಕೆಟ್ ಹೈವರ್ಡ್ಸ್, 8 ಬಿಯರ್ ಟಿನ್, 15 ಓಟಿ ಪೌಚ್ ಹಾಗೂ 12 ಬ್ಯಾಗ್ ಪೈಪರ್ ಪೌಚ್ ಜಪ್ತಿಪಡಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.