ಹಾಸನ: ಕಾಸ್ಮೋ ಕ್ಲಬ್ ಮೇಲೆ ಪೊಲೀಸರು ದಾಳಿ ನಡೆಸಿದ್ದು ನಗದು ಸೇರಿದಂತೆ ಅನೇಕ ವಸ್ತುಗಳನ್ನು ವಶಪಡಿಸಿಕೊಂಡು ಹತ್ತೊಂಬತ್ತು ಜನರಿಗೆ ನೋಟೀಸ್ ನೀಡಿರುವ ಘಟನೆ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದಲ್ಲಿರುವ ಕಾಸ್ಮೋ ಕ್ಲಬ್ ಮೇಲೆ ಡಿವೈಎಸ್ಪಿ ಉದಯ್ಭಾಸ್ಕರ್ ನೇತೃತ್ವದಲ್ಲಿ ಸಕಲೇಶಪುರ ನಗರಠಾಣೆ ಪೊಲೀಸರು ದಾಳಿ ನಡೆಸಿದ್ದು, 75,040 ನಗದು, ಮೂರು ಟೇಬಲ್, 19 ಚೇರ್ಗಳು ಹಾಗೂ ಜೂಜಾಡುತ್ತಿದ್ದ 19 ಮಂದಿಯನ್ನು ವಶಕ್ಕೆ ಪಡೆದು ನೋಟೀಸ್ ಜಾರಿ ಮಾಡಿ ಬಿಡುಗಡೆಗೊಳಿಸಿದ್ದಾರೆ. ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.