ಆಹಾರ ಅರಸಿ ಗದ್ದೆಗೆ ಬಂದ ಕಾಳಿಂಗ.! ಒಂದು ಗಂಟೆ ಸಾಹಸ ಪಟ್ಟು ಸೆರೆಹಿಡಿದ ಸ್ನೇಕ್ ಗಗನ್

ಮಡಿಕೇರಿ: ಆಹಾರ ಅರಸಿ ಕಾಡಿನಿಂದ ಕೃಷಿ ಜಮೀನಿನತ್ತ ಬಂದಿದ್ದ ಬೃಹತ್ ಕಾಳಿಂಗ ಸರ್ಪವನ್ನ ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ. ತಾಲೂಕಿನ ಚೇರಂಬಾಣೆ ಗ್ರಾಮದ ಕೂಡಕಂಡಿ‌ ಅಪ್ಪಣ್ಣ ಎಂಬುವರ ಗದ್ದೆಯಲ್ಲಿ ಕಾಣಿಸಿಕೊಂಡ‌ ಕಾಳಿಂಗ ಸರ್ಪ ಆತಂಕ ಮೂಡಿಸಿತ್ತು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯವರು ಉರಗ ರಕ್ಷಕ ಪೊನ್ನೀರ ಸ್ನೇಕ್ ಗಗನ್ ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಗಗನ್ ಒಂದು ಗಂಟೆಗಳ‌ ಕಾಲ ಸಾಹಸ ಪಟ್ಟು ಕಾಳಿಂಗವನ್ನು ಸುರಕ್ಷಿತವಾಗಿ ಸೆರೆಹಿಡಿದು ತಲಕಾವೇರಿ ಅರಣ್ಯಕ್ಕೆ ಬಿಡಲಾಯಿತು.