ಪಶ್ಚಿಮ ಘಟ್ಟದ ವೃಕ್ಷ ರಕ್ಷಣೆಯ ಜೊತೆ ಭಟ್ಕಳದಲ್ಲಿ ಹಿಂದೂ ಧರ್ಮವನ್ನೂ ರಕ್ಷಿಸುವ ಕಾರ್ಯವಾಗಬೇಕು.! – ನಾಗರಾಜ ನಾಯ್ಕ್

ಭಟ್ಕಳ: “ಗೋವಿಂದ್ ನಾಯ್ಕ್ ಅವರು ಪಶ್ಚಿಮ ಘಟ್ಟಗಳ ವೃಕ್ಷದ ರಕ್ಷಣೆಯ ಜೊತೆಗೆ ಹಿಂದೂ ಧರ್ಮ, ಸನಾತನ ಸಂಸ್ಥೆಯ ವೃಕ್ಷವನ್ನೂ ನೆಟ್ಟು ಬೆಳೆಸುವ ಕಾರ್ಯ ಮಾಡಬೇಕು” ಎಂದು ಜಿಲ್ಲಾ ಬಿಜೆಪಿ ಮಾದ್ಯಮ ವಕ್ತಾರ ನಾಗರಾಜ ನಾಯ್ಕ ಅವರು ಹೇಳಿದರು.

ಅವರು ಪಟ್ಟಣದ ಆಸರಕೇರಿ ಸಭಾಭವನದಲ್ಲಿ ಪಶ್ಚಿಮ ಘಟ್ಟ ಸoರಕ್ಷಣ ಕಾರ್ಯಪಡೆ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಗೋವಿಂದ ಜೆ ನಾಯ್ಕ ಅವರಿಗೆ ಬಿಜೆಪಿ ಭಟ್ಕಳ ಮಂಡಲ ನೇತೃತ್ವದಲ್ಲಿ ಸಾರ್ವಜನಿಕ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು. ಗೋವಿಂದ ನಾಯ್ಕ್ ಭಟ್ಕಳದ ಹಿಂದೂ ಕಾರ್ಯಕರ್ತರ ರಕ್ಷಣೆಗಾಗಿ ಹಲವು ಬಾರಿ ಜೈಲುವಾಸ ಅನುಭವಿಸಿದ್ದಾರೆ. ಹಿಂದೂ ಕಾರ್ಯಕರ್ತರ ರಕ್ಷಣೆಗಾಗಿ ಹಗಲು ರಾತ್ರಿ ಎನ್ನದೆ ಹೋರಾಟ ನಡೆಸುತ್ತಿದ್ದ ಅವರಿಗೆ ಸರ್ಕಾರ ಗುರುತಿಸಿ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಿದ್ದು ಜಿಲ್ಲೆಯ ಎಲ್ಲರಿಗೂ ಸಂತೋಷ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಗೋವಿಂದ ನಾಯ್ಕ ಮಾತನಾಡಿದರು. ಶಾಸಕ ಸುನೀಲ ನಾಯ್ಕ, ನಿಚ್ಚಮಕ್ಕಿ ದೇವಸ್ಥಾನದ ಅಧ್ಯಕ್ಷ ಕೃಷ್ಣಾ ನಾಯ್ಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯಕ್ ಸೇರಿದಂತೆ ತಾಲೂಕಿನ ಎಲ್ಲಾ ಸಮಾಜದ ಮುಖಂಡರು, ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಬಿಜೆಪಿ ಮುಖಂಡರು ಕಾರ್ಯಕರ್ತರು ಹಾಜರಿದ್ದರು.