ಹೊನ್ನಾವರ ಜ.20 : ರಾಮ್ ತೀರ್ಥ ಕ್ರಾಸ್ ಬಳಿ ಸಂಶಯದ ಆಧಾರದ ಮೇಲೆ ಪೊಲೀಸರು ಬೈಕನ್ನು ನಿಲ್ಲಿಸಿ ತಪಾಸಣೆ ನಡೆಸಿದ ವೇಳೆ ಸಿಫ್ರಾನ್ ಮತ್ತು ಸೈಯದ್ ಗುಲ್ಜಾರ್ ಎಂಬ ಇಬ್ಬರು ಓಡಿಸಿಕೊಂಡು ಬರುತ್ತಿದ್ದ ಬೈಕಿನಲ್ಲಿ 106 ಗ್ರಾಂ ಗಾಂಜಾ ಪತ್ತೆಯಾಗಿದೆ. ತಕ್ಷಣವೇ ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದ್ದು, ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಸಿದ್ದರಾಮೇಶ್ವರ ಪಿ.ಐ, ರಮಾನಂದ ಎಚ್.ಸಿ, ರಾಜು ನಾಯಕ್ ಎಚ್.ಸಿ, ಪ್ರಶಾಂತ್ ನಾಯಕ, ವೆಂಕಟೇಶ್, ಹರಿಕಾಂತ ಪಿ.ಸಿ, ಕಿರಣ್, ಅನಿಲ್ ಹಾಗೂ ಚಾಲಕರಾದ ಎಚ್.ಸಿ ಚಂದ್ರಶೇಖರ್ ಅವರು ಭಾಗವಹಿಸಿದ್ದರು.
