50 ಸೆಕೆಂಡು, 8 ಶ್ಲೋಕ! ಪುಟ್ಟ ರಮಾ ವಿರಾಜ್ ಬಿಡೆ ಸಾಧನೆಗೆ ಏಷ್ಯಾ ದಾಖಲೆ

ಹೊನ್ನಾವರ ಜ.01: ಕೇವಲ 50 ಸೆಂಕೆಡನಲ್ಲಿ 8 ಗಣಪತಿ ಶ್ಲೋಕವನ್ನು ಹೇಳುವ ಮೂಲಕ ರಮಾ ವಿರಾಜ್ ಬಿಡೆ ಏಷ್ಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದಾಳೆ.

ಗೋವಾದಲ್ಲಿ ಒಂದನೇ ತರಗತಿ ಅಧ್ಯಯನ ಮಾಡುತ್ತಿರುವ ಇವಳು ಕನ್ನಡ ಮರಾಠಿ, ಹಿಂದಿ,ಕೊಂಕಣಿ ಭಾಷೆಯನ್ನು ಮಾತನಾಡುವ ಇವಳ ಸಾಧನೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಅಭಿನಂದಿಸಿದ್ದಾರೆ.

ಇವಳ ತಾಯಿ ತಾಲೂಕಿನ ಹೀರೆಬೈಲ್ ಮೂಲದವಳಾಗಿದ್ದು, ಗೋವಾಕ್ಕೆ ವಿವಾಹವಾಗಿ ಅಲ್ಲಿ ಪ್ರಸುತ್ತ ಅಲ್ಲಿಯೇ ವಾಸವಾಗಿದ್ದಾರೆ. ಪುಟ್ಟ ಬಾಲಕಿಯ ಸಾಧನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.