ಮೈಸೂರು ದಸರಾ: ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾಗುತ್ತಿದೆ 30 ಜಿಲ್ಲೆಗಳ ಸ್ತಬ್ಧಚಿತ್ರ

ಮೈಸೂರು: ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗುವ ರಾಜ್ಯದ ನಾನಾ ಜಿಲ್ಲೆಗಳ ಸ್ತಬ್ಧಚಿತ್ರಗಳು ಅತ್ಯಂತ ಆಕರ್ಷಣೆಯಾಗಿದ್ದು, ಅವುಗಳಲ್ಲಿ ರೈಲ್ವೆ ಇಲಾಖೆ ಸ್ತಬ್ಧಚಿತ್ರವು ಅದ್ಭುತವಾಗಿ ಮೂಡಿ ಬಂದಿದೆ. 30 ಜಿಲ್ಲೆಗಳ ಸ್ತಬ್ಧಚಿತ್ರಗಳು ಸೇರಿದಂತೆ ವಿವಿಧ ನಿಗಮ, ಇಲಾಖೆಗಳ 35ಕ್ಕೂ ಹೆಚ್ಚಿನ ಸ್ತಬ್ಧಚಿತ್ರಗಳು ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾಗುತ್ತಿವೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಶಕ್ತಿ ಯೋಜನೆಯ ಯಶೋಗಾಥೆ, ಹಿಂದುಸ್ಥಾನ್​ ಏರೊನಾಟಿಕ್ಸ್​ ಲಿಮಿಟೆಡ್​ ವಿಜಯದ ರನ್​ವೇ ಭಾರತದ ಆಕಾಶಕ್ಕೆ ಎಚ್ಎಎಲ್​ನ ಶಕ್ತಿ, ಭಾರತೀಯ ರೈಲ್ವೆ ಇಲಾಖೆ ಚೆನಾಬ್ ಸೇತುವೆ ಹಾಗೂ ಪಂಬನ್ ಸೇತು, ಭೋವಿ ಅಭಿವೃದ್ಧಿ ನಿಗಮ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಯೋಜನೆ, ನಗರಾಭಿವೃದ್ಧಿ ಇಲಾಖೆ ಸ್ಮಾರ್ಟ್, ಶುದ್ಧ ಕಾಳಜಿಯ ನಗರಗಳು, ಮೈಸೂರು ಮಹಾನಗರ ಪಾಲಿಕೆ ಸ್ವಾಸ್ಥ್ಯ ಮತ್ತು ಸುಸ್ಥಿರ ಮೈಸೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕರ್ನಾಟಕದ ನವ ನಿರ್ಮಾಣಕ್ಕೆ ಗ್ಯಾರಂಟಿ ಸರ್ಕಾರ ಮಾದರಿ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಅಭೂತಪೂರ್ವ ಸಾಧನ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಡ್ರಗ್ಸ್ ಮುಕ್ತ ಕ್ಯಾಂಪಸ್ ಹಾಗೇ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಅವರಿಂದರಲೂ ಮಾದರಿ ಪ್ರದರ್ಶನ ಗಮನ ಸೆಳೆಯಿತು…