ಖ್ಯಾತ ಹಿಂದೂಸ್ತಾನಿ ಗಾಯಕ ಅಶೋಕ್‌ ಹುಗ್ಗಣ್ಣನವರ ಇನ್ನಿಲ್ಲ..!

ಖ್ಯಾತ ಹಿಂದೂಸ್ತಾನಿ ಗಾಯಕರಾದ ಅಶೋಕ್‌ ಹುಗ್ಗಣ್ಣನವರ ತಮ್ಮ ಸುದೀರ್ಘ ಸಂಗೀತ ಸೇವೆ ನಿಲ್ಲಿಸಿ ಇಂದು ನಸುಕಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಹೊನ್ನಾವರದ ಎಸ್‌ಡಿಎಂ ಕಾಲೇಜಿನಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ವಿಜ್ಞಾನ, ಸಂಗೀತಗಳಲ್ಲಿ ಡಾಕ್ಟರೇಟ್‌ ಪಡೆದಿದ್ದ ಹುಗ್ಗಣ್ಣವರ ಕಲಾಶ್ರೀ ಸಹಿತ ಹಲವು ಪುರಸ್ಕಾರಗಳನ್ನು ಪಡೆದಿದ್ದರು. 64 ವಯಸ್ಸಿನಲ್ಲಿ ಪತ್ನಿ ಶಿಕ್ಷಕಿ ವೀಣಾ ಮತ್ತು ವಿಜ್ಞಾನಿ ಗಾಯಕ ಮಗ ವಿನಾಯಕನನ್ನು ಅಗಲಿದ್ದಾರೆ. ನೂರಾರು ಪ್ರತಿಭಾವಂತ ಶಿಷ್ಯರನ್ನು ತರಬೇತಿಗೊಳಿಸಿರುವ ಇವರು ಹಿಂದೂಸ್ತಾನಿ ಸಂಗೀತ ಲೋಕದಲ್ಲಿ ಅವೀಸ್ಮರಣೀಯ…