
ಕಾರವಾರದಲ್ಲಿ ರೋಟರಿ ಕ್ಲಬ್ ಆಯೋಜಿಸಿದ್ದ 10 ಕಿ.ಮೀ ಓಪನ್ ನಡಿಗೆ ಸ್ಪರ್ಧೆಯಲ್ಲಿ ಹೊನ್ನಾವರದ ಪ್ರಭಾಕರ್ ಗೌಡ ಪ್ರಥಮ ಸ್ಥಾನ ಪಡೆದಿದ್ದಾನೆ.

ಪ್ರತಿವರ್ಷದಂತೆ ಈ ವರ್ಷವೂ ಸಹ ಪ್ರಥಮ ಸ್ಥಾನದೊಂದಿಗೆ ಸತತ ಮೂರು ಬಾರಿ ಪ್ರಥಮ ಸ್ಥಾನವನ್ನು ಪಡೆದು ಹೊನ್ನಾವರ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ಹೊನ್ನಾವರದಲ್ಲಿ ಮಕ್ಕಳಿಗೆ ಕರಾಟೆ ತರಬೇತಿಯನ್ನು ನೀಡುತ್ತಿರುವ ಪ್ರಭಾಕರಗೌಡ ಅವರ ಈ ಸಾಧನೆಗೆ ವಿದ್ಯಾರ್ಥಿಗಳು ಮತ್ತು ಹೊನ್ನಾವರ ಜನತೆ ಅಭಿನಂದನೆ ಸಲ್ಲಿಸಿದ್ದಾರೆ..

