ಎನ್‌ಎಸ್‌ಇ ಹಾಗೂ ಬಿಎಸ್‌ಇ ಕ್ಯಾಲೆಂಡರ್ ಪ್ರಕಾರ 2026ರಲ್ಲಿ ಷೇರು ಮಾರುಕಟ್ಟೆಗೆ ಒಟ್ಟು 15 ದಿನಗಳ ರಜೆ ಇರಲಿದೆ. ಶನಿವಾರ ಮತ್ತು ಭಾನುವಾರಗಳನ್ನು ಹೊರತುಪಡಿಸಿ ಈ ರಜೆಗಳು ಅನ್ವಯವಾಗುತ್ತವೆ. ಜನವರಿ 26ರ ಗಣರಾಜ್ಯೋತ್ಸವದಿಂದ ಆರಂಭವಾಗಿ ಡಿಸೆಂಬರ್ 25ರ ಕ್ರಿಸ್ಮಸ್‌ವರೆಗೆ ವಿವಿಧ ಹಬ್ಬಗಳು ಹಾಗೂ ವಿಶೇಷ ದಿನಗಳಲ್ಲಿ ಮಾರುಕಟ್ಟೆ ಮುಚ್ಚಿರಲಿದೆ. ಶ್ರೀರಾಮನವಮಿ, ಬಕ್ರೀದ್, ಮಹಾರಾಷ್ಟ್ರ ದಿನ, ದಸರಾ, ದೀಪಾವಳಿ ಸೇರಿದಂತೆ ಹಲವು ಪ್ರಮುಖ ರಜೆಗಳು ಈ ಪಟ್ಟಿಯಲ್ಲಿ ಸೇರಿವೆ.

ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ 2026ರ ವರ್ಷದ ರಜಾ ದಿನಗಳ ಕ್ಯಾಲೆಂಡರ್ ಬಿಡುಗಡೆ ಮಾಡಿದೆ. ಇದರ ಪ್ರಕಾರ, ಮುಂದಿನ ವರ್ಷ 15 ದಿನ ರಜೆಗಳನ್ನು ಘೋಷಿಸಲಾಗಿದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಕೂಡ ಇದೇ ರಜಾ ದಿನಗಳನ್ನು ಹೊಂದಿದೆ. ಪ್ರತೀ ವಾರಾಂತ್ಯದ ಎರಡು ದಿನಗಳನ್ನು ಹೊರತುಪಡಿಸಿದ ರಜಾದಿನಗಳು ಇವು. ಹೆಚ್ಚಿನ ಸಾರ್ವತ್ರಿಕ ರಜೆಗಳು ಷೇರು ಮಾರುಕಟ್ಟೆಗೂ ಅನ್ವಯಿಸುತ್ತವೆ.
2026ರಲ್ಲಿ ಷೇರು ಮಾರುಕಟ್ಟೆಗೆ ರಜಾದಿನಗಳು
- ಜನವರಿ 26, ಸೋಮವಾರ: ಗಣರಾಜ್ಯೋತ್ಸವ
- ಮಾರ್ಚ್ 3, ಮಂಗಳವಾರ: ಹೋಳಿ ಹಬ್ಬ
- ಮಾರ್ಚ್ 26, ಗುರುವಾರ: ಶ್ರೀರಾಮನವಮಿ
- ಮಾರ್ಚ್ 31, ಮಂಗಳವಾರ: ಮಹಾವೀರ ಜಯಂತಿ
- ಏಪ್ರಿಲ್ 3, ಶುಕ್ರವಾರ: ಗುಡ್ ಫ್ರೈಡೇ
- ಏಪ್ರಿಲ್ 14, ಮಂಗಳವಾರ: ಅಂಬೇಡ್ಕರ್ ಜಯಂತಿ
- ಮೇ 1, ಶುಕ್ರವಾರ: ಮಹಾರಾಷ್ಟ್ರ ದಿನ
- ಮೇ 28, ಗುರುವಾರ: ಬಕ್ರೀದ್
- ಜೂನ್ 26, ಶುಕ್ರವಾರ: ಮುಹರಂ
- ಸೆಪ್ಟೆಂಬರ್ 14, ಸೋಮವಾರ: ಗಣೇಶ ಚತುರ್ಥಿ
- ಅಕ್ಟೋಬರ್ 2, ಶುಕ್ರವಾರ: ಗಾಂಧಿ ಜಯಂತಿ
- ಅಕ್ಟೋಬರ್ 20, ಮಂಗಳವಾರ: ದಸರಾ
- ನವೆಂಬರ್ 10, ಮಂಗಳವಾರ: ದೀಪಾವಳಿ
- ನವೆಂಬರ್ 24, ಮಂಗಳವಾರ: ಗುರುನಾನಕ್ ಜಯಂತಿ
- ಡಿಸೆಂಬರ್ 25, ಶುಕ್ರವಾರ: ಕ್ರಿಸ್ಮಸ್
ಮೇಲಿನ ರಜಾದಿನಗಳಲ್ಲದೇ, ವಾರಾಂತ್ಯದ ಶನಿವಾರ ಮತ್ತು ಭಾನುವಾರ ಕೂಡ ಮಾರುಕಟ್ಟೆ ಬಂದ್ ಆಗಿರುತ್ತದೆ. ಎನ್‌ಎಸ್‌ಇ ಮತ್ತು ಬಿಎಸ್‌ಇ ಕಚೇರಿಗಳು ಮುಂಬೈನಲ್ಲಿ ಇರುವುದರಿಂದ ಅಲ್ಲಿ ಸ್ಥಳೀಯ ರಜೆಗಳೂ ಅನ್ವಯ ಆಗುತ್ತದೆ. ಹೀಗಾಗಿ, ಮಹಾರಾಷ್ಟ್ರ ದಿನದಂದು ಷೇರು ಮಾರುಕಟ್ಟೆ ಬಾಗಿಲು ಹಾಕುತ್ತದೆ. ಹಾಗೆಯೇ, ಮುಂಬೈ ಮಹಾನಗರಪಾಲಿಕೆ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳು ಇದ್ದ ದಿನವೂ ಷೇರುಪೇಟೆಗೆ ರಜೆ ಇರುತ್ತದೆ.
