ರಿಷಿಕೇಶದಲ್ಲಿ ರಸ್ತೆ ಬದಿಯಲ್ಲಿ ಸರಳವಾಗಿ ಊಟ ಸವಿದ ರಜನಿಕಾಂತ್; ಸೂಪರ್‌ಸ್ಟಾರ್‌ನ ವಿನಯಕ್ಕೆ ನೆಟ್ಟಿಗರ ಮೆಚ್ಚುಗೆ

ಸೂಪರ್‌ಸ್ಟಾರ್ ರಜನಿಕಾಂತ್ ‘ಕೂಲಿ’ ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಆಧ್ಯಾತ್ಮಿಕ ವಿಶ್ರಾಂತಿಯಿಗಾಗಿ ರಿಷಿಕೇಶ್ಗೆ ತೆರಳಿದ್ದಾರೆ. ನೂರಾರು ಕೋಟಿ ಸಂಪಾದಿಸಿದರೂ, ಅವರು ಅಲ್ಲಿ ಸರಳ ಜೀವನವನ್ನು ಅಳವಡಿಸಿಕೊಂಡು ರಸ್ತೆ ಬದಿಯಲ್ಲೇ ಊಟ ಮಾಡುತ್ತಿರುವ ದೃಶ್ಯಗಳು ಇದೀಗ ವೈರಲ್ ಆಗಿವೆ. ರಜನಿಕಾಂತ್ ದಯಾನಂದ ಆಶ್ರಮಕ್ಕೆ ಭೇಟಿ ನೀಡಿ, ಗಂಗಾ ನದಿಯ ತೀರದಲ್ಲಿ ಧ್ಯಾನದಲ್ಲೂ ತೊಡಗಿದ್ದಾರೆ.

ನಟ ರಜನಿಕಾಂತ್ ಅವರು ಸೂಪರ್ ಸ್ಟಾರ್. ನೂರಾರು ಕೋಟಿ ರೂಪಾಯಿ ಆಸ್ತಿಯನ್ನು ಅವರು ಹೊಂದಿದ್ದಾರೆ. ಆದಾಗ್ಯೂ ಸರಳ ಜೀವನ ನಡೆಸಲು ಅವರು ಆದ್ಯತೆ ನೀಡುತ್ತಾರೆ. ಅವರ ತಲೆಯ ಮೇಲೆ ಕೂದಲು ಉದುರಿದೆ. ಆದರೆ, ಇತರ ಹೀರೋಗಳಂತೆ ತೆರೆ ಹಿಂದೆ ಅವರು ಟೋಪನ್ ಹಾಕುವುದಿಲ್ಲ. ಹೇಗಿದ್ದಾರೋ ಹಾಗೆಯೇ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ಈಗ ಅವರ ಹೊಸ ಫೋಟೋ ಒಂದು ವೈರಲ್ ಆಗಿದೆ. ರಿಷಿಕೇಶಕ್ಕೆ ತೆರಳಿರೋ ಅವರು ಅಲ್ಲಿ, ಸರಳವಾಗಿ ರಸ್ತೆ ಬದಿಯಲ್ಲಿ ನಿಂತು ಎಲೆಯ ಪ್ಲೇಟ್​ನಲ್ಲಿ ಊಟ ಸವಿಯುತ್ತಿದ್ದಾರೆ.

ರಜನಿಕಾಂತ್ ಅವರು ಪ್ರತಿ ಸಿನಿಮಾ ರಿಲೀಸ್ ಬಳಿಕ ಒಂದು ಆಧ್ಯಾತ್ಮಿಕ ಬ್ರೇಕ್ ಪಡೆಯುತ್ತಾರೆ. ರಿಷಿಕೇಶ ಹಾಗೂ ಇತರ ಪವಿತ್ರ ಸ್ಥಳಗಳಿಗೆ ತೆರಳಿ ಕೆಲ ದಿನ ಇದ್ದು ಬರುತ್ತಾರೆ. ಅವರ ನಟನೆಯ ‘ಕೂಲಿ’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಜನಿಕಾಂತ್ ಅವರು ರಿಷಿಕೇಶಕ್ಕೆ ತೆರಳಿದ್ದಾರೆ. ಅಲ್ಲಿ ಅವರು ಸರಳ ಜೀವನ ನಡೆಸುತ್ತಿದ್ದಾರೆ.

ಉತ್ತರಾಖಾಂಡದ ರಿಷಿಕೇಷದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ರಜನಿಕಾಂತ್ ಭೇಟಿ ನಿಡಿದ್ದರು. ಈ ವೇಳೆ ಅವರು ತಮ್ಮ ಆಧ್ಯತ್ಮ ಗುರುವಿಗೆ ನಮನ ಸಲ್ಲಿಸಿದರು. ಗಂಗಾ ನದಿಯ ಪಕ್ಕದಲ್ಲಿ ಕುಳಿತು ಧ್ಯಾನ ಮಾಡಿದ್ದಾರೆ. ಗಂಗಾ ಆರತಿಯನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ.  ರಿಷಿಕೇಶದ ಬಳಿಕ ರಜನಿಕಾಂತ್ ಅವರು ದ್ವಾರಹಾತ್​ಗೆ ತೆರಳಿದ್ದಾರೆ.  ದಾರಿ ಮಧ್ಯೆ ನಿಂತು ಅವರು ಊಟ ಸವಿದಿದ್ದಾರೆ. ಬಿಳಿ ಬಣ್ಣದ ಪಂಚೆ, ಬಿಳಿ ಬಣ್ಣದ ಶರ್ಟ್ ಹಾಕಿದ್ದಾರೆ. ಹೆಗಲ ಮೇಲೆ ಬಿಳಿ ಬಣ್ಣದ ಶಾಲಿದೆ.