ಬೆಂಗಳೂರು: ಸೋಮವಾರ (ಅ. 6) ಬೆಳಗ್ಗೆ ಯಶವಂತಪುರ ಮೆಟ್ರೋ ನಿಲ್ದಾಣದಲ್ಲಿ ಭಾರೀ ಜನದಟ್ಟಣೆ ಉಂಟಾದ ಕಾರಣದಿಂದಾಗಿ ಸುಮಾರು ಅರ್ಧಗಂಟೆ ಕಾಲ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು.

ಆಯುಧ ಪೂಜೆ ಮತ್ತು ದಸರಾ ರಜೆಯ ಬಳಿಕ ನಗರಕ್ಕೆ ಮರಳುತ್ತಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ, ಬೆಳಗ್ಗೆ ಯಶವಂತಪುರ ಮೆಟ್ರೋ ನಿಲ್ದಾಣದ ಬಳಿ ಭಾರೀ ಗಿಜಿಗುಡಿ ಕಂಡುಬಂತು. ಪ್ರಯಾಣಿಕರ ಸುರಕ್ಷತೆ ಮತ್ತು ದಟ್ಟಣೆ ನಿಯಂತ್ರಣದ ಉದ್ದೇಶದಿಂದ, ಅಧಿಕಾರಿಗಳು ಬೆಳಗ್ಗೆ 8:50 ರಿಂದ 9:15ರವರೆಗೆ ನಿಲ್ದಾಣದ ಪ್ರವೇಶವನ್ನು ತಾತ್ಕಾಲಿಕವಾಗಿ ಬಂದ್ ಮಾಡಿದರು.
