ಶಿರಸಿ ಉಪವಿಭಾಗಾಧಿಕಾರಿ ಕಾವ್ಯರಾಣಿ ಮೈಸೂರು ಜಿಲ್ಲೆಗೆ ವರ್ಗಾವಣೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾವ್ಯ ರಾಣಿ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಅವರನ್ನು ಮೈಸೂರು ಜಿಲ್ಲೆಯ ಹುಣಸೂರು ಉಪವಿಭಾಗಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

ಕಾವ್ಯರಾಣಿ ಅವರು ಕೇವಲ ಶಿರಸಿ ಉಪವಿಭಾಗವಷ್ಟೇ ಅಲ್ಲದೇ, ಭಟ್ಕಳ ಉಪವಿಭಾಗಾಧಿಕಾರಿ ಹುದ್ದೆಯ ಹೆಚ್ಚುವರಿ ಪ್ರಭಾರವನ್ನೂ ವಹಿಸಿಕೊಂಡಿದ್ದರು. ಇದೀಗ ಇವರ ವರ್ಗಾವಣೆಯಿಂದಾಗಿ ಏಕಕಾಲಕ್ಕೆ ಶಿರಸಿ ಹಾಗೂ ಭಟ್ಕಳ ಎರಡೂ ಕಡೆ ಎಸಿ ಹುದ್ದೆಗಳಲ್ಲಿ ಬದಲಾವಣೆಯಾಗಲಿದೆ. ಹುಣಸೂರು ಉಪವಿಭಾಗಾಧಿಕಾರಿ ಹುದ್ದೆ ಖಾಲಿ ಇದ್ದ ಹಿನ್ನೆಲೆಯಲ್ಲಿ ಇವರನ್ನು ಅಲ್ಲಿಗೆ ನೇಮಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಇವರ ವರ್ಗಾವಣೆಯಿಂದ ತೆರವಾಗಲಿರುವ ಶಿರಸಿ ಎಸಿ ಸ್ಥಾನಕ್ಕೆ ಸರ್ಕಾರವಿನ್ನೂ ನೂತನ ಅಧಿಕಾರಿಯನ್ನು ನೇಮಕ ಮಾಡಿಲ್ಲ ಎನ್ನಲಾಗಿದೆ.