ರಾಷ್ಟ್ರ ಪ್ರಶಸ್ತಿ ವಿಜೇತ ನಾರಾಯಣ ಭಾಗವತರಿಗೆ ‘ಕನ್ನಡ ಜ್ಞಾನ ನೇಸರ’ ಪ್ರಶಸ್ತಿ

ಶಿರಸಿ: ರಾಷ್ಟ್ರ ಪ್ರಶಸ್ತಿ‌ ಪಡೆದ ಕನ್ನಡದ ಶಿಕ್ಷಕ, ಇಲ್ಲಿನ ಡಯಟ್ ತರಬೇತಿ ಸಂಸ್ಥೆಯ ಉಪನ್ಯಾಸಕ ನಾರಾಯಣ ಪಿ.ಭಾಗ್ವತ ಅವರಿಗೆ ಉಡುಪಿಯ ಕನ್ನಡ ಭಾಷಾ ಶಿಕ್ಷಕರ ಸಂಘ ನೀಡುವ ಕನ್ನಡ ಜ್ಞಾನ ನೇಸರ‌ ಪ್ರಶಸ್ತಿ ಪ್ರಕಟಿಸಲಾಗಿದೆ.


ಉಡುಪಿಯ ಕಾರ್ಕಳ‌ ಕ್ರಿಯೇಟಿವ್ ಕಾಲೇಜಿನಲ್ಲಿ ನ.೩೦ರಂದು ನಡೆಸಲಾಗುವ ಸಮಾರಂಭದಲ್ಲಿ‌ ನಾರಾಯಣಗುರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಂಜುನಾಥ ಭಂಡಾರಿ, ಸಂಘದ ಅಧ್ಯಕ್ಷ ಆನಂದ ಸಾಲಿಗ್ರಾಮ ಸೇರಿದಂತೆ ಅನೇಕರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮೂಲತಃ ಕುಮಟಾ ತಾಲ್ಲೂಕು ಹಂದಿಗೋಣ ಗ್ರಾಮದ ನಾರಾಯಣ ಭಾಗ್ವತ ಪ್ರಸ್ತುತ ಶಿರಸಿ ನಿವಾಸಿಯಾಗಿದ್ದು, ಮಾರಿಕಾಂಬಾ ಪ್ರೌಢಶಾಲೆಯಲ್ಲಿದ್ದಾಗ ಎರಡು ವರ್ಷದ ಹಿಂದೆ ರಾಷ್ಟ್ರ ಪ್ರಶಸ್ತಿ ಬಂದಿತ್ತು ಎಂಬುದು ಉಲ್ಲೇಖನೀಯ.