ಬಸ್‌ ಸೌಲಭ್ಯ ವಿಸ್ತರಿಸುವಂತೆ ಆಗ್ರಹಿಸಿ ಕರುನಾಡ ವಿಜಯಸೇನೆಯಿಂದ ತಹಶೀಲ್ದಾರರಿಗೆ ಮನವಿ

ಪ್ರತಿನಿತ್ಯ ಕುಮಟಾ ಡಿಪೋದಿಂದ ಹೊರಡುವ ಮಾಳ್ಕೋಡ ಬಸ್ಸನ್ನು ಮೊಳ್ಕೋಡ ಅಡ್ಕರಿ ಕ್ರಾಸ್‌ ವರೆಗೂ ವಿಸ್ತರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ಕರುನಾಡ ವಿಜಯಸೇನೆ ವತಿಯಿಂದ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯ್ತು..

ಹೊನ್ನಾವರ ಬಸ್‌ ನಿಲ್ದಾಣದಿಂದದ ಪ್ರತಿನಿತ್ಯ ಮಾಳ್ಕೋಡ್‌ ಗ್ರಾಮಕ್ಕೆ ಬಸ್‌ ಸಂಚಾರವಿದ್ದು, ಆ ಬಸ್‌ ಕೇವಲ ಮಾಳ್ಕೋಡ್‌ ಬಸ್‌ ನಿಲ್ದಾಣದವರೆಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಮಾಳ್ಕೋಡನಿಂದ 2 ರಿಂದ 2.5 ಕಿಮೀ ವ್ಯಾಪ್ತಿಯಲ್ಲಿ ಮೊಳ್ಕೋಡ್‌ ಮಜರೆ ಬರುತ್ತದೆ. ಇಲ್ಲಿ ಸುಮಾರು 400 ಕುಟುಂಬಗಳು ವಾಸ್ತವ್ಯ ಹೊಂದಿದ್ದು, 3000ಜನರು ವಾಸವಿದ್ದಾರೆ. ಪ್ರತಿನಿತ್ಯ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಜನರು ವ್ಯಾಪಾರ ವಹಿವಾಟಿಗೆ ಯಾವುದೇ ಕೆಲಸ ಕಾರ್ಯಗಳಿಗೆ ಹೊನ್ನಾವರಕ್ಕೆ ಬರಲು ಅವರಿಗೆ ಬಸ್‌ ಸೌಲಭ್ಯ ಇಲ್ಲದಂತಾಗಿದೆ. ಅಲ್ಲದೇ ಜನರು, ಶಾಲಾ ಕಾಲೇಜು ವಿದ್ಯಾರ್ಥಗಳು, ಉದ್ಯೋಗಿಗಳು ಪ್ರತಿನಿತ್ಯ 1 ರಿಂದ 2 ಕಿಮೀ ನಡೆದುಕೊಂಡು ಬಂದು ಬಸ್‌ ಹಿಡಿಯಬೇಕಾದ ಅನಿವಾರ್ಯತೆಯಿದೆ. ಆದ್ದರಿಂದ ಮಾಳ್ಕೋಡ್‌ ಬಸ್‌ ನಿಲ್ದಾಣದಿಂದ ಮೊಳ್ಕೋಡ್‌ ಅಡ್ಕರಿ ಕ್ರಾಸ್‌ ವರೆಗೆ ಬಸ್‌ ಸಂಚಾರಕ್ಕೆ ಯಾವುದೇ ಅಡೆತಡೆಯಿಲ್ಲ ಹಾಗಾಗಿ ಸೂಕ್ತ ಬಸ್‌ ಸೌಲಭ್ಯ ನೀಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದ್ರು..

ಈ ವೇಳೆ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ವಿನಾಯಕ ಆಚಾರಿ, ಸಂಚಾಲಕರಾದ ಅಲ್ಪಾಶೇಖ್.‌ ಅಕ್ಷಯ ಉಪ್ಪಾರ, ಮಂಜು ಗೌಡ, ಗಣಪಯ್ಯ ಗೌಡ, ಮಾರುತಿ ಅನಿಲಗೋಡ, ಹಾಗೂ ಇನ್ನೀತರರು ಉಪಸ್ಥಿತರಿದ್ರ…