ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ವಿಲಾಸಿ ಜೀವನ; ಇಂದು 2ನೇ ಬಾರಿಗೆ ನಟ ಧನ್ವೀರ್ ವಿಚಾರಣೆ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ರಾಜಾತಿಥ್ಯ ಜೀವನದ ವೀಡಿಯೋಗಳು ವೈರಲ್‌ ಆಗಿದ ಪ್ರಕರಣದಲ್ಲಿ ನಟ ಧನ್ವೀರ್ ಇಂದು ಎರಡನೇ ಬಾರಿಗೆ ವಿಚಾರಣೆಗೆ ಹಾಜರಾಗಲಿದ್ದಾರೆ. ಧನ್ವೀರ್ ಪಾತ್ರದ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ, ಪೊಲೀಸರು ಅವರ ಮೊಬೈಲ್‌ನ್ನು ವಶಕ್ಕೆ ಪಡೆದು ಮೊದಲ ಹಂತದ ವಿಚಾರಣೆ ನಡೆಸಿದ್ದರು.

ಮೊದಲ ಪರಿಶೀಲನೆಯಲ್ಲಿ ಮೊಬೈಲ್‌ನಲ್ಲಿ ಯಾವುದೇ ವೀಡಿಯೋ ಪತ್ತೆಯಾಗಿರಲಿಲ್ಲ. ಆದರೆ, ಧನ್ವೀರ್ ಮೊಬೈಲ್‌ನಿಂದ ಕೆಲವು ವೀಡಿಯೋಗಳು ಮತ್ತವರಿಗೂ ಕಳುಹಿಸಲಾಗಿದ್ದವು ಎಂಬ ಮಾಹಿತಿಯನ್ನು ಪೊಲೀಸರು ಪಡೆದಿದ್ದರು. ಇದೀಗ ಮೊಬೈಲ್ ರಿಟ್ರೀವ್ ರಿಪೋರ್ಟ್ ಲಭ್ಯವಾಗಿದ್ದು, ಧನ್ವೀರ್ ಪಾತ್ರಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳು ಬೆಳಕಿಗೆ ಬಂದಿವೆ ಎಂದು ತಿಳಿದುಬಂದಿದೆ.

ಈ ಕಾರಣಕ್ಕೆ ಅವರನ್ನು ಮತ್ತೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದ್ದು, ಇಂದು ಪರಪ್ಪನ ಅಗ್ರಹಾರ ಪೊಲೀಸರ ಮುಂದೆ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ. ಮೊಬೈಲ್ ರಿಟ್ರೀವ್ ರಿಪೋರ್ಟ್ ಹಾಗೂ ಇಂದು ನಡೆಯುವ ವಿಚಾರಣೆಯಲ್ಲಿ ಹೊರಬರುವ ಮಾಹಿತಿಯ ಮೇರೆಗೆ ಧನ್ವೀರ್‌ ಅವರಿಗೆ ನಿಜವಾದ ಸಂಕಷ್ಟ ಆರಂಭವಾಗುತ್ತದೆಯೋ, ಇಲ್ಲವೇ ಪ್ರಕರಣದಿಂದ ಹೊರಬರುವಂತಾಗುತ್ತದೆಯೋ ಎಂಬುದು ಸ್ಪಷ್ಟವಾಗಲಿದೆ.