ಗಿಲ್ಲಿ ಇರಲಿಲ್ಲದಿದ್ದರೆ ಈ ಸೀಸನ್ ಝೀರೋ; ಮಾಜಿ ಬಿಗ್ ಬಾಸ್ ಸ್ಪರ್ಧಿಯ ಹೇಳಿಕೆ!

‘ಬಿಗ್ ಬಾಸ್ ಕನ್ನಡ ಸೀಸನ್ 12’ ನಲ್ಲಿ ಗಿಲ್ಲಿ ನಟ ಈಗಾಗಲೇ ಪ್ರೇಕ್ಷಕರ ಮನಗೆದ್ದಿದ್ದಾರೆ. ಅವರ ಆಟ ಮನರಂಜನೆಯ ಜೊತೆಗೆ ಸ್ಪರ್ಧಾತ್ಮಕತೆಯಿಂದ ಕೂಡಿದೆ. ಗಿಲ್ಲಿ ಕುರಿತಂತೆ ಎಲ್ಲೆಡೆ ಪಾಸಿಟಿವ್ ಪ್ರತಿಕ್ರಿಯೆಗಳು ಕೇಳಿಬರುತ್ತಿವೆ.

ಇದೀಗ ಮಾಜಿ ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಅವರು ಗಿಲ್ಲಿಯ ಆಟವನ್ನು ಹೊಗಳಿದ್ದಾರೆ. “ಗಿಲ್ಲಿ ಇಲ್ಲದಿದ್ದರೆ ಈ ಸೀಸನ್ ಝೀರೋ!” ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಹೇಳಿಕೆಗೆ ಅನೇಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರಶಾಂತ್ ಸಂಬರ್ಗಿ ಅವರು ಸಾಮಾಜಿಕ ಹೋರಾಟದ ಮೂಲಕ ಪ್ರಸಿದ್ಧಿ ಪಡೆದವರು ಹಾಗೂ ಬಿಗ್ ಬಾಸ್ 8 ಮತ್ತು 9ನೇ ಸೀಸನ್‌ಗಳಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ತಮ್ಮ ಮಾತು ಮತ್ತು ಸ್ಪಷ್ಟ ಅಭಿಪ್ರಾಯಗಳಿಂದ ಗುರುತಿಸಿಕೊಂಡಿರುವ ಅವರು, ಈ ಬಾರಿ ಗಿಲ್ಲಿಯ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಬಿಗ್ ಬಾಸ್ 12 ನಡೀತಾ ಇದೆ. ನಾನು 8 ಹಾಗೂ 9ರಲ್ಲಿ ಭಾಗಿಯಾಗಿದ್ದೆ. ಈಗ ನೋಡ್ತಾ ಇದ್ದೇನೆ. ಫ್ಯಾಮಿಲಿಗೆ ಬೇಕಾದ ಎಂಟರ್‌ಟೇನ್‌ಮೆಂಟ್ ಕೊಡ್ತಾ ಇರೋದು ಗಿಲ್ಲಿ. ಗಿಲ್ಲಿ ಇಲ್ದ್ರೆ ಶೋ ಶೂನ್ಯ. ಅವನು ಇಲ್ದೆ ಹೋಗಿದ್ರೆ ಶೋ ಮುಗಿಯಬೇಕಿತ್ತು. ಅಶ್ವಿನಿ ಮೊದಲಾದವರು ಸಪೋರ್ಟ್ ಕೊಡ್ತಿದ್ದಾರೆ, ಆದ್ರೆ ಗಿಲ್ಲಿ ಬೆಸ್ಟ್! ಎಲ್ಲರಿಗೂ ಆಲ್ ದಿ ಬೆಸ್ಟ್,” ಎಂದು ಅವರು ಹೇಳಿದ್ದಾರೆ. ಈಗಾಗಲೇ ಕಿಚ್ಚ ಸುದೀಪ್ ಅವರಿಂದ ಚಪ್ಪಾಳೆ ಪಡೆದಿರುವ ಗಿಲ್ಲಿ, ಮುಂದಿನ ಎಪಿಸೋಡ್‌ಗಳಲ್ಲಿಯೂ ಮತ್ತಷ್ಟು ಮೆಚ್ಚುಗೆ ಗಳಿಸುವ ಸಾಧ್ಯತೆ ಇದೆ. ಪ್ರೇಕ್ಷಕರು ಗಿಲ್ಲಿಯ ಆಟವನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ.