ನವದೆಹಲಿ, ನವೆಂಬರ್ 3: ನಿನ್ನೆ ರಾತ್ರಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ ಅಂತಿಮ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಭಾರತದ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಬಿಹಾರದ ಸಹರ್ಸಾದಲ್ಲಿ ನಡೆದ ಬೃಹತ್ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ನಮ್ಮ ಮಹಿಳಾ ಕ್ರಿಕೆಟ್ ತಂಡದ ಅದ್ಭುತ ಗೆಲುವಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದು ಇಡೀ ದೇಶಕ್ಕೆ ಹೆಮ್ಮೆಯ ಕ್ಷಣ. ನಮ್ಮ ಹೆಣ್ಣುಮಕ್ಕಳ ಈ ಸಾಧನೆ ಲಕ್ಷಾಂತರ ಯುವತಿಯರಿಗೆ ದೊಡ್ಡ ಕನಸು ಕಾಣಲು ಮತ್ತು ಶ್ರೇಷ್ಠತೆಯೆಡೆಗೆ ಹೆಜ್ಜೆಯಿಡಲು ಸ್ಫೂರ್ತಿ ನೀಡುತ್ತದೆ” ಎಂದು ಹೇಳಿದರು.

ಮಹಿಳಾ ಕ್ರಿಕೆಟ್ ತಂಡದ ದೃಢ ನಿಶ್ಚಯ ಮತ್ತು ಬದ್ಧತೆಯನ್ನು ಶ್ಲಾಘಿಸಿದ ಮೋದಿ, “ನಿಮ್ಮ ಈ ಜಯ ರಾಷ್ಟ್ರದ ಹೆಮ್ಮೆಯಾಗಿದೆ, ನೀವು ಭಾರತವನ್ನು ವಿಶ್ವ ವೇದಿಕೆಯಲ್ಲಿ ಗರ್ವದಿಂದ ಎತ್ತಿದ್ದೀರಿ” ಎಂದು ಪ್ರಶಂಸಿಸಿದರು.
