ಟೀಮ್ ಇಂಡಿಯಾ ಎಷ್ಟು ರನ್​ಗಳಿಸಿ ಡಿಕ್ಲೇರ್ ಮಾಡಬೇಕು? 

ಭಾರತ ಮತ್ತು ಇಂಗ್ಲೆಂಡ್​ ನಡುವಣ ಮೊದಲ ಟೆಸ್ಟ್ ಪಂದ್ಯವು ನಾಲ್ಕನೇ ದಿನದಾಟಕ್ಕೆ ಕಾಲಿಟ್ಟಿದೆ. ಮೊದಲ ಮೂರು ದಿನದಾಟಗಳಲ್ಲಿ ಉಭಯ ತಂಡಗಳು ಸಮಬಲದ ಪ್ರದರ್ಶನ ನೀಡಿದೆ. ಹೀಗಾಗಿ ನಾಲ್ಕನೇ ದಿನದಾಟವು ನಿರ್ಣಾಯಕ. ಇತ್ತ ಮೂರನೇ ದಿನದಾಟದ ಕೊನೆಯ ಸೆಷನ್​ನಲ್ಲಿ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ 2 ವಿಕೆಟ್ ಕಳೆದುಕೊಂಡು 90 ರನ್​ಗಳಿಸಿದೆ.

ನಾಲ್ಕನೇ ದಿನದಾಟದಲ್ಲಿ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ (47) ಹಾಗೂ ಶುಭ್​​ಮನ್ ಗಿಲ್ (6) ಇನಿಂಗ್ಸ್ ಮುಂದುವರೆಸಲಿದ್ದಾರೆ. ಅಲ್ಲದೆ ಇಂದು ಭಾರತ ತಂಡವು ಸಂಪೂರ್ಣ ಬ್ಯಾಟಿಂಗ್ ಕಾಯ್ದುಕೊಳ್ಳುವ ಸಾಧ್ಯತೆಯಿದೆ. ಅಂದರೆ 4ನೇ ದಿನದಾಟದಲ್ಲಿ ಟೀಮ್ ಇಂಡಿಯಾ ಡಿಕ್ಲೇರ್ ಘೋಷಿಸುವ ಸಾಧ್ಯತೆಯಿಲ್ಲ. ಏಕೆಂದರೆ ಹೆಡಿಂಗ್ಲೆ ಮೈದಾನವು ಬ್ಯಾಟಿಂಗ್ ಸ್ನೇಹಿ ಪಿಚ್​ ಹೊಂದಿದ್ದು, ಇಲ್ಲಿ ಚೇಸಿಂಗ್ ಮಾಡುವುದು ಸುಲಭ. ಇದಕ್ಕೆ ಸಾಕ್ಷಿ ಈ ಹಿಂದಿನ ಅಂಕಿ ಅಂಶಗಳು.

ಯಶಸ್ವಿ ಚೇಸ್ ಯಾವುದು?

  • ಹೆಡಿಂಗ್ಲೆ ಮೈದಾನದಲ್ಲಿ ಅತ್ಯಧಿಕ ರನ್ ಚೇಸ್ ಮಾಡಿ ಗೆದ್ದಿರುವುದು ಆಸ್ಟ್ರೇಲಿಯಾ ತಂಡ. 1948 ರಲ್ಲಿ ಇಂಗ್ಲೆಂಡ್ ವಿರುದ್ಧ 404 ರನ್​ಗಳ ಗುರಿಯನ್ನು ಬೆನ್ನತ್ತಿ ಆಸೀಸ್ ಪಡೆ ಜಯ ಸಾಧಿಸಿತ್ತು.
  • ಇದಾದ ಬಳಿಕ ಈ ಮೈದಾನದಲ್ಲಿ ಕಂಡು ಬಂದ ಅತ್ಯಂತ ಯಶಸ್ವಿ ಚೇಸಿಂಗ್ ಇಂಗ್ಲೆಂಡ್ ತಂಡದ್ದು. 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 359 ರನ್​ಗಳನ್ನು ಚೇಸ್ ಮಾಡಿ ಐತಿಹಾಸಿಕ ಗೆಲುವು ದಾಖಲಿಸಿತ್ತು.
  • ಇದಲ್ಲದೆ ಇತ್ತೀಚಿನ ವರ್ಷಗಳ ಅಂಕಿ ಅಂಶಗಳನ್ನು ತೆಗೆದುಕೊಂಡರೆ, 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್​ ನಾಲ್ಕನೇ ಇನಿಂಗ್ಸ್​ನಲ್ಲಿ 251 ರನ್​ ಬಾರಿಸಿ ಗೆಲುವು ದಾಖಲಿಸಿದೆ. ಹಾಗೆಯೇ 2022 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಇಂಗ್ಲೆಂಡ್ 296 ರನ್​ಗಳ ಗುರಿ ಬೆನ್ನತ್ತುವಲ್ಲಿ ಯಶಸ್ವಿಯಾಗಿದೆ.

ಅಂದರೆ ಹೆಡಿಂಗ್ಲೆ ಮೈದಾನದಲ್ಲಿ ನಾಲ್ಕನೇ ಇನಿಂಗ್ಸ್​ನಲ್ಲಿ 250 ರಿಂದ 350 ರನ್​ಗಳಿಸುವುದು ಕಷ್ಟವೇನಲ್ಲ. ಹೀಗಾಗಿ ಭಾರತ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ ಕನಿಷ್ಠ 400+ ಸ್ಕೋರ್​ಗಳಿಸದೇ ಡಿಕ್ಲೇರ್​ ಘೋಷಿಸುವ ಸಾಧ್ಯತೆಯಿಲ್ಲ.

ಈ ಮೂಲಕ ಇಂಗ್ಲೆಂಡ್​ಗೆ ತಂಡಕ್ಕೆ ಕೊನೆಯ ಇನಿಂಗ್ಸ್​ನಲ್ಲಿ ಕನಿಷ್ಠ 400+ ರನ್​ಗಳ ಗುರಿ ನೀಡಲು ಪ್ಲ್ಯಾನ್ ರೂಪಿಸಲಿದ್ದಾರೆ. ಒಂದು ವೇಳೆ ಟೀಮ್ ಇಂಡಿಯಾ 300ರ ಅಸುಪಾಸಿನಲ್ಲಿ ಆಲೌಟ್ ಆದರೆ, ಇಂಗ್ಲೆಂಡ್ ಚೇಸಿಂಗ್​ಗೆ ಪ್ರಯತ್ನಿಸುವುದು ಖಚಿತ.

ಏಕೆಂದರೆ ಟೆಸ್ಟ್ ಕ್ರಿಕೆಟ್​ನಲ್ಲಿ ಆಕ್ರಮಣಕಾರಿ ರಣತಂತ್ರವನ್ನು ಅಳವಡಿಸಿಕೊಂಡಿರುವ ಇಂಗ್ಲೆಂಡ್ ತಂಡವು ಕಳೆದ ಕೆಲ ವರ್ಷಗಳಿಂದ ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದಕ್ಕಿಂತ ಮ್ಯಾಚ್ ಗೆಲ್ಲಲು ಪ್ರಯತ್ನಿಸುತ್ತಾ ಬಂದಿದೆ. ಈ ಪ್ರಯತ್ನವು ಹಲವು ಬಾರಿ ಆಂಗ್ಲರ ಕೈ ಹಿಡಿದಿದೆ. ಹೀಗಾಗಿ ಟೀಮ್ ಇಂಡಿಯಾ 300 ರನ್​ಗಳ ಅಸುಪಾಸಿನಲ್ಲಿ ರನ್​ಗಳಿಸಿದರೆ, ಇಂಗ್ಲೆಂಡ್ ಗೆಲುವಿನ ಲೆಕ್ಕಾಚಾರದೊಂದಿಗೆ ಕಣಕ್ಕಿಳಿಯುವುದು ಖಚಿತ.

ಇತ್ತ ಟೀಮ್ ಇಂಡಿಯಾ ಪರ ಮೊದಲ ಇನಿಂಗ್ಸ್​ನಲ್ಲಿ ಜಸ್​ಪ್ರೀತ್ ಬುಮ್ರಾ ಅವರನ್ನು ಹೊರತುಪಡಿಸಿದರೆ, ಉಳಿದ ವೇಗಿಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಅದರಲ್ಲೂ ಪ್ರಸಿದ್ಧ್ ಕೃಷ್ಣ 20 ಓವರ್​ಗಳಲ್ಲಿ 128 ರನ್ ನೀಡಿದರೆ, ಮೊಹಮ್ಮದ್ ಸಿರಾಜ್ 27 ಓವರ್​ಗಳಲ್ಲಿ 122 ರನ್ ಬಿಟ್ಟು ಕೊಟ್ಟಿದ್ದರು. ಹೀಗಾಗಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಡ್ರಾ ಸಾಧಿಸಲು ಅಥವಾ ಗೆಲ್ಲಲು ಬಯಸಿದರೆ, ಕನಿಷ್ಠ 400 ರನ್​ಗಳನ್ನು ಕಲೆಹಾಕಲೇಬೇಕು.

ಹೆಡಿಂಗ್ಲೆ ಟೆಸ್ಟ್ ಪಂದ್ಯಗಳ ಯಶಸ್ವಿ ರನ್ ಚೇಸ್‌ಗಳು:

ಶ್ರೇಣಿತಂಡಗುರಿಸ್ಕೋರ್ಓವರ್‌ಗಳುರನ್ ರೇಟ್ಎದುರಾಳಿವರ್ಷ
1ಆಸ್ಟ್ರೇಲಿಯಾ404404/3114.43.53ಇಂಗ್ಲೆಂಡ್1948
2ಇಂಗ್ಲೆಂಡ್359362/9125.42.88ಆಸ್ಟ್ರೇಲಿಯಾ2019
3ವೆಸ್ಟ್ ಇಂಡೀಸ್322322/591.23.52ಇಂಗ್ಲೆಂಡ್2017
4ಇಂಗ್ಲೆಂಡ್315315/473.24.29ಆಸ್ಟ್ರೇಲಿಯಾ2001
5ಇಂಗ್ಲೆಂಡ್296296/354.25.44ನ್ಯೂಝಿಲೆಂಡ್2022
6ಇಂಗ್ಲೆಂಡ್251254/750.05.08ಆಸ್ಟ್ರೇಲಿಯಾ2023
7ಇಂಗ್ಲೆಂಡ್219219/780.2೨.೭೨ಪಾಕಿಸ್ತಾನ1982
8ಇಂಗ್ಲೆಂಡ್184186/552.43.53ಸೌತ್ ಆಫ್ರಿಕಾ1929
9ಪಾಕಿಸ್ತಾನ180180/750.43.55ಆಸ್ಟ್ರೇಲಿಯಾ2010
10ವೆಸ್ಟ್ ಇಂಡೀಸ್128131/232.34.03ಇಂಗ್ಲೆಂಡ್1984