ನಾಳೆಯಿಂದ ದ್ವಿತೀಯಾರ್ಧದ ಐಪಿಎಲ್ ಆರಂಭ; ಉಳಿದ ಪಂದ್ಯಗಳ ವೇಳಾಪಟ್ಟಿ ಹೀಗಿದೆ

ಭಾರತ-ಪಾಕಿಸ್ತಾನ ಉದ್ವಿಗ್ನತೆಯಿಂದಾಗಿ ಒಂದು ವಾರ ಸ್ಥಗಿತಗೊಂಡಿದ್ದ ಐಪಿಎಲ್ 2025 ಮೇ 17 ರಿಂದ ಮತ್ತೆ ಆರಂಭವಾಗುತ್ತಿದೆ. ಬಿಸಿಸಿಐ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಉಳಿದ 17 ಪಂದ್ಯಗಳು 6 ನಗರಗಳಲ್ಲಿ ನಡೆಯಲಿವೆ. ಪ್ಲೇಆಫ್ ಪಂದ್ಯಗಳ ದಿನಾಂಕಗಳು ನಿಗದಿಯಾಗಿದ್ದು, ಫೈನಲ್ ಜೂನ್ 3 ರಂದು ನಡೆಯಲಿದೆ. ಡಬಲ್ ಹೆಡರ್ ಪಂದ್ಯಗಳನ್ನು ಎರಡು ಭಾನುವಾರಗಳಂದು ಆಡಲಾಗುವುದು.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ 57 ಪಂದ್ಯಗಳ ನಂತರ 2025 ರ ಐಪಿಎಲ್  ಅನ್ನು ಬಿಸಿಸಿಐ ಒಂದು ವಾರ ಸ್ಥಗಿತಗೊಳಿಸಿತ್ತು. ಇದೀಗ ಪರಿಸ್ಥಿತಿ ತಿಳಿಯಾಗಿದ್ದು ಮಿಲಿಯನ್ ಡಾಲರ್ ಟೂರ್ನಿ ಇದೇ ಮೇ 17 ರಿಂದ ಅಂದರೆ ನಾಳೆಯಿಂದ ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ಪಂದ್ಯದೊಂದಿಗೆ ಮತ್ತೆ ಪ್ರಾರಂಭವಾಗುತ್ತಿದೆ. ವಾಸ್ತವವಾಗಿ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧದ ಭೀತಿ ಎದುರಾಗಿದ್ದರಿಂದ ಮೇ 8 ರಂದು ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಿದ್ದ ಬಿಸಿಸಿಐ 2025 ರ ಐಪಿಎಲ್ ಅನ್ನು ಒಂದು ವಾರ ಮುಂದೂಡಿರುವುದಾಗಿ ಮೇ 9 ರಂದು ಘೋಷಿಸಿತ್ತು. ಆದರೀಗ ಎರಡೂ ದೇಶಗಳು ಕದನ ವಿರಾಮ ಘೋಷಿಸಿರುವ ಕಾರಣ ಬಿಸಿಸಿಐ ಉಳಿದ ಪಂದ್ಯಗಳಿಗೆ ಹೊಸ ವೇಳಾಪಟ್ಟಿಯನ್ನು ಮೇ 12 ರಂದು ಪ್ರಕಟಿಸಿದೆ. ಹೊಸ ವೇಳಾಪಟ್ಟಿಯ ಪ್ರಕಾರ ಉಳಿದ 17 ಪಂದ್ಯಗಳು 6 ಸ್ಥಳಗಳಲ್ಲಿ ನಡೆಯಲಿವೆ. ಹಾಗೆಯೇ ಫೈನಲ್ ಪಂದ್ಯವು ಜೂನ್ 3 ರಂದು ನಡೆಯಲಿದೆ.

ಹೊಸ ವೇಳಾಪಟ್ಟಿ ಪ್ರಕಟ

ಉಳಿದ ಪಂದ್ಯಗಳನ್ನು ಬೆಂಗಳೂರು, ದೆಹಲಿ, ಲಕ್ನೋ, ಮುಂಬೈ, ಅಹಮದಾಬಾದ್ ಮತ್ತು ಜೈಪುರ ಸೇರಿದಂತೆ 6 ಸ್ಥಳಗಳಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಈ ಅವಧಿಯಲ್ಲಿ, ಉಳಿದ ಲೀಗ್ ಪಂದ್ಯಗಳನ್ನು ಮೇ 17 ರಿಂದ ಮೇ 25 ರವರೆಗೆ ಆಡಲಾಗುವುದು, ಇದರಲ್ಲಿ 2 ಡಬಲ್ ಹೆಡರ್‌ ಪಂದ್ಯಗಳು ಸೇರಿವೆ. ಅಂದರೆ ಒಂದೇ ದಿನ 2 ಪಂದ್ಯಗಳು ನಡೆಯಲಿದ್ದು, ಈ ಡಬಲ್ ಹೆಡರ್ ಪಂದ್ಯಗಳನ್ನು ಎರಡು ಭಾನುವಾರಗಳಂದು ನಡೆಸಲು ತೀರ್ಮಾನಿಸಲಾಗಿದೆ. ಇದಲ್ಲದೆ, ಪ್ಲೇಆಫ್ ಪಂದ್ಯಗಳು ಮೇ 29 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ. ಆದರೆ ಲೀಗ್ ಪಂದ್ಯಗಳಿಗೆ ಸ್ಥಳಗಳನ್ನು ಪ್ರಕಟಿಸಿರುವ ಬಿಸಿಸಿಐ ಪ್ಲೇಆಫ್ ಪಂದ್ಯಗಳ ಸ್ಥಳಗಳನ್ನು ಇನ್ನೂ ನಿರ್ಧರಿಸಿಲ್ಲ. ಆದಾಗ್ಯೂ ಪ್ಲೇ ಆಫ್ ಪಂದ್ಯಗಳ ದಿನಾಂಕ ನಿಗದಿಯಾಗಿದ್ದು, ಕ್ವಾಲಿಫೈಯರ್ 1- ಮೇ 29 ರಂದು, ಎಲಿಮಿನೇಟರ್- ಮೇ 30 ರಮದು, ಕ್ವಾಲಿಫೈಯರ್ 2- ಜೂನ್ 1 ರಂದು ಮತ್ತು ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ.

ದಿನಾಂಕಮುಖಾಮುಖಿಸಮಯಸ್ಥಳ
17-05-2025ಆರ್​ಸಿಬಿ vs ಕೆಕೆಆರ್ಸಂಜೆ 7:30ಬೆಂಗಳೂರು
18-05-2025ರಾಜಸ್ಥಾನ vs ಪಂಜಾಬ್ಮಧ್ಯಾಹ್ನ 3:30ಜೈಪುರ
18-05-2025ಡೆಲ್ಲಿ vs ಗುಜರಾತ್ಸಂಜೆ 7:30ದೆಹಲಿ
19-05-2025ಲಕ್ನೋ vs ಹೈದರಾಬಾದ್ಸಂಜೆ 7:30ಲಕ್ನೋ
20-05-2025ಸಿಎಸ್​ಕೆ vs ರಾಜಸ್ಥಾನ್ಸಂಜೆ 7:30ದೆಹಲಿ
21-05-2025ಮುಂಬೈ vs ಡೆಲ್ಲಿಸಂಜೆ 7:30ಮುಂಬೈ
22-05-2025ಗುಜರಾತ್ vs ಲಕ್ನೋಸಂಜೆ 7:30ಅಹಮದಾಬಾದ್
23-05-2025ಆರ್​ಸಿಬಿ vs ಹೈದರಾಬಾದ್ಸಂಜೆ 7:30ಬೆಂಗಳೂರು
24-05-2025ಪಂಜಾಬ್ vs ಡೆಲ್ಲಿಸಂಜೆ 7:30ಜೈಪುರ
25-05-2025ಗುಜರಾತ್ vs ಸಿಎಸ್​ಕೆಮಧ್ಯಾಹ್ನ 3:30ಅಹಮದಾಬಾದ್
25-05-2025ಹೈದರಾಬಾದ್ vs ಕೋಲ್ಕತ್ತಾಸಂಜೆ 7:30ದೆಹಲಿ
26-05-2025ಪಂಜಾಬ್ vs ಮುಂಬೈಸಂಜೆ 7:30ಜೈಪುರ
27-05-2025ಲಕ್ನೋ vs ಆರ್​ಸಿಬಿಸಂಜೆ 7:30ಲಕ್ನೋ
29-05-2025ಕ್ವಾಲಿಫೈಯರ್ 1ಸಂಜೆ 7:30ಸ್ಥಳ ನಿಗದಿ ಪಡಿಸಿಲ್ಲ
30-05-2025ಎಲಿಮಿನೇಟರ್ಸಂಜೆ 7:30ಸ್ಥಳ ನಿಗದಿ ಪಡಿಸಿಲ್ಲ
01-06-2025ಕ್ವಾಲಿಫೈಯರ್ 2ಸಂಜೆ 7:30ಸ್ಥಳ ನಿಗದಿ ಪಡಿಸಿಲ್ಲ
03-06-2025ಫೈನಲ್ ಪಂದ್ಯಸಂಜೆ 7:30ಸ್ಥಳ ನಿಗದಿ ಪಡಿಸಿಲ್ಲ