ಸ್ನೇಹಿತರ ನಡುವೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ

ಬೆಂಗಳೂರು: ಸ್ನೇಹಿತರ ನಡುವೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಲಗಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಹುದ್ದೂರ್ ಕೊಲೆಯಾದ ಯುವಕ. ಬಹುದ್ದೂರ್ ನೇಪಾಳ ಮೂಲದವನಾಗಿದ್ದ ಬೆಂಗಳೂರಿನ ತಲಘಟ್ಟಪುರ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ.

ನಿನ್ನೆ ರಾತ್ರಿ ಕೆಲಸ ಮುಗಿಸಿ ಬಂದಾಗ ಊಟಕ್ಕೆ ಸಾಂಬಾರ್ ಮಾಡುವ ವಿಚಾರಕ್ಕೆ ಗೆಳೆಯರು ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗು ಸ್ನೇಹಿತ ಮಹೇಂದ್ರ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾನೆ.

ಘಟನೆ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಘಟನೆ ಕಾರಣನಾಗಿದ್ದ ಆರೋಪಿ ಮಹೇಂದ್ರವನ್ನ ಬಂಧನ ಮಾಡಿದ್ದಾರೆ. ಆರೋಪಿ ಮಹೇಂದ್ರ ವಿಚಾರಣೆ ವೇಳೆ ಒಟ್ಟಿಗೆ ಇಬ್ಬರು ಕೆಲಸ ಮಾಡಿಕೊಂಡು ಒಂದೇ ರೂಂನಲ್ಲಿ ವಾಸವಾಗಿದ್ವಿ. ನಿನ್ನೆ ಸಾಂಬರ್ ಮಾಡುವ ವಿಚಾರಕ್ಕೆ ನಮ್ನಿಬ್ಬರ ನಡುವೆ ಗಲಾಟೆ ಆಡಿದಾಗ ಘಟನೆ ಸಂಭವಿಸಿದೆ ಎಂದು ಹೇಳಿದ್ದಾನೆಂದು ತಿಳಿದುಬಂದಿದೆ.