ಸರ್ದಾರ್ ಪಟೇಲ್ ಜಯಂತಿ; ಏಕತಾ ಪ್ರತಿಮೆ ಬಳಿ ಗಣರಾಜ್ಯೋತ್ಸವ ಶೈಲಿಯ ಪರೇಡ್

ಅಹಮದಾಬಾದ್, ಅಕ್ಟೋಬರ್ 31: ಇಂದು ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯನ್ನು ರಾಷ್ಟ್ರೀಯ ಏಕತಾ ದಿವಸವಾಗಿ ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ಗುಜರಾತ್‌ನ ಏಕತಾ ನಗರದಲ್ಲಿರುವ ಏಕತಾ ಪ್ರತಿಮೆ ಬಳಿ ಗಣರಾಜ್ಯೋತ್ಸವ ಶೈಲಿಯ ಅದ್ಧೂರಿ ಪರೇಡ್‌ ನಡೆಯಿತು.

ಈ ವಿಶೇಷ ಮೆರವಣಿಗೆಯಲ್ಲಿ ಮೊದಲ ಬಾರಿಗೆ ದೇಶದ ವಿವಿಧ ರಾಜ್ಯಗಳ ಹಾಗೂ ಕೇಂದ್ರ ಪೊಲೀಸ್ ಪಡೆಗಳ ತುಕಡಿಗಳು ಗಣರಾಜ್ಯೋತ್ಸವದ ಮಾದರಿಯಲ್ಲಿ ಭಾಗವಹಿಸಿದವು. ಹತ್ತು ರಾಜ್ಯಗಳ ಟ್ಯಾಬ್ಲೋಗಳು, ಸೂರ್ಯಕಿರಣ್ ಏರೋಬ್ಯಾಟಿಕ್ ತಂಡದ ಆಕಾಶ ಪ್ರದರ್ಶನ ಮತ್ತು ಮಹಿಳಾ ನೇತೃತ್ವದ ಪಡೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.

ನವೆಂಬರ್ 1ರಿಂದ 15ರವರೆಗೆ ‘ಭಾರತ್ ಪರ್ವ್’ ಹಾಗೂ ಸರ್ದಾರ್ ಪಟೇಲ್ ಅವರಿಗೆ ಗೌರವ ಸೂಚಿಸುವ ಪಾದಯಾತ್ರೆಗಳಂತಹ ವಿವಿಧ ಕಾರ್ಯಕ್ರಮಗಳು ದೇಶದಾದ್ಯಂತ ನಡೆಯಲಿವೆ.