‘ಕಾಂತಾರ ಚಾಪ್ಟರ್ 1’ನಲ್ಲಿ ಆಗಾಗ ಕಾಣಿಸಿಕೊಂಡ ಮಾಯಕಾರನ ಪಾತ್ರ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಯಾರು ಈ ರಹಸ್ಯಮಯ ವಯೋವೃದ್ಧ? ಅಂತ ಹಲವರು ಅಚ್ಚರಿಯಿಂದ ನೋಡಿದಾಗ, ಅದು ಬೇರೆ ಯಾರೂ ಅಲ್ಲ — ರಿಷಬ್ ಶೆಟ್ಟಿ ಅವರೇ ಎಂದು ನಂತರ ಬಹಿರಂಗವಾಯಿತು.

ಹೌದು, ರಿಷಬ್ ಶೆಟ್ಟಿ ಚಿತ್ರದಲ್ಲಿ ಬೆರ್ಮೆ ಪಾತ್ರದ ಜೊತೆಗೆ ಮಾಯಕಾರನ ಪಾತ್ರವನ್ನೂ ಮಾಡಿದ್ದಾರೆ. ಆದರೆ ಆ ವಯೋವೃದ್ಧನ ರೂಪ ತಾಳುವುದು ಸುಲಭವಲ್ಲ. ಪ್ರತಿದಿನ ಕನಿಷ್ಠ 6 ಗಂಟೆಗಳ ಕಾಲ ಮೇಕಪ್ ಮಾಡಿಸಿಕೊಂಡು ನಂತರವೇ ಸೆಟ್‌ಗೆ ಆಗಮಿಸುತ್ತಿದ್ದರಂತೆ ರಿಷಬ್. ಇತ್ತೀಚಿಗೆ ಬಿಡುಗಡೆಯಾದ “ಮೇಕಿಂಗ್ ಆಫ್ ಮಾಯಕಾರ” ವಿಡಿಯೋದಲ್ಲಿ, ರಿಷಬ್ ಬೆಳಗ್ಗೆ 3 ಗಂಟೆಗೆ ಸೆಟ್‌ಗೆ ಬಂದು ಮೇಕಪ್ ಪ್ರಾರಂಭಿಸುತ್ತಿರುವ ದೃಶ್ಯಗಳು ಕಾಣುತ್ತವೆ. ಸುಮಾರು 6 ಗಂಟೆಗಳ ನಂತರ ಅವರು ಸಂಪೂರ್ಣವಾಗಿ ಮಾಯಕಾರನ ರೂಪ ತಾಳುತ್ತಾರೆ.
ವಿಶ್ವದಾದ್ಯಂತ 818 ಕೋಟಿ ಗಳಿಕೆ ಮಾಡಿದ ಕಾಂತಾರ ಚಾಪ್ಟರ್ ಚಿತ್ರದ ಈ ಯಶಸ್ಸಿನ ಹಿಂದೆ ರಿಷಬ್ ಶೆಟ್ಟಿಯ ಅಪ್ರತಿಮ ಪರಿಶ್ರಮ ಮತ್ತು ಕಲೆಗೆ ಭಕ್ತಿ ಸ್ಪಷ್ಟವಾಗಿ ಕಾಣುತ್ತದೆ.
