ಮುಂಬೈ ಬೀದಿಗಳಲ್ಲಿ ಪುಷ್ಪವೃಷ್ಟಿಯಿಂದ ರಿಷಬ್ ಶೆಟ್ಟಿಗೆ ಭರ್ಜರಿ ಸ್ವಾಗತ!

ಕಾಂತಾರ: ಚಾಪ್ಟರ್ 1 ಮೂಲಕ ಭರ್ಜರಿ ಯಶಸ್ಸು ಕಂಡ ರಿಷಬ್ ಶೆಟ್ಟಿ, ಈಗ ರಾಷ್ಟ್ರಮಟ್ಟದ ಖ್ಯಾತಿಯ ನಕ್ಷತ್ರರಾಗಿದ್ದಾರೆ. ಕರ್ನಾಟಕದಷ್ಟೇ ಅಲ್ಲ, ಪರಭಾಷೆಯ ಪ್ರೇಕ್ಷಕರ ಮನಸೂ ಗೆದ್ದಿರುವ ಅವರು ಇತ್ತೀಚೆಗೆ ಮುಂಬೈಗೆ ಆಗಮಿಸಿದ್ದಾರೆ. ಕಾರಿನ ಸನ್‌ರೂಫ್ ಮೂಲಕ ಕೈ ಬೀಸಿದ ರಿಷಬ್ ಶೆಟ್ಟಿಗೆ ಅಭಿಮಾನಿಗಳು ಪುಷ್ಪವೃಷ್ಟಿ ಮಾಡಿ ಅದ್ಧೂರಿ ಸ್ವಾಗತ ನೀಡಿದರು. “ಪ್ರತಿ ತಂತ್ರಜ್ಞನ ಕನಸು ನಿಜವಾದ ಕ್ಷಣ ಇದು” ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.