ದಾವಣಗೆರೆ, ಅಕ್ಟೋಬರ್ 14: ಇತ್ತೀಚೆಗೆ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಾರಕ ಕಫ್ ಸಿರಪ್ ಸೇವನೆದಿಂದ 11 ಮಕ್ಕಳು ಮೃತಪಟ್ಟ ಘಟನೆ ದೇಶವನ್ನೇ ನಡುಗಿಸಿತ್ತು. ಆ ಸಿರಪ್ ಈಗ ನಿಷೇಧಿತವಾಗಿದ್ದರೂ, ದಾವಣಗೆರೆಯಲ್ಲಿ ಅಮಲು ಉಂಟುಮಾಡುವ ಸಿರಪ್ ಮಾರಾಟದ ಗದ್ದಲ ಮತ್ತೆ ಕೇಳಿಬಂದಿದೆ.

ಬಸವನಗರ ಪೊಲೀಸರು ನಡೆಸಿದ ದಾಳಿಯಲ್ಲಿ ಐವರು ಆರೋಪಿಗಳನ್ನು ಬಂಧಿಸಿ, ಸುಮಾರು 1.24 ಲಕ್ಷ ಮೌಲ್ಯದ ಅಮಲು ಸಿರಪ್ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
