ಜಾತಿಗಣತಿಗೆ ಹೋದ ಶಿಕ್ಷಕಿಯನ್ನೇ ಲಾಕ್‌ ಮಾಡಿದ ವ್ಯಕ್ತಿ

ಬೆಂಗಳೂರು: ಜಾತಿಗಣತಿಗೆ ಹೋದ ಶಿಕ್ಷಕಿ ಸುಶೀಲಮ್ಮ ಮೇಲೆ ಕೋತಿ ಹೊಸಹಳ್ಳಿ, ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಕಿರುಕುಳ ನಡೆಸಿದ ಘಟನೆ ನಡೆದಿದೆ. ಬುಧವಾರ ಸಂಜೆ, ಶಿಕ್ಷಕಿ ಸುಶೀಲಮ್ಮ ಅವರು ಸಂದೀಪ್ ಅವರ ಮನೆಯನ್ನು ಭೇಟಿ ಮಾಡಿದರು ಮತ್ತು ಆಧಾರ್ ಕಾರ್ಡ್ ನೀಡುವಂತೆ ಕೇಳಿದರು. ಮನೆಯಲ್ಲಿದ್ದವರು, “ನೀವು ಯಾವ ಕಂಪನಿಯವರು? ಇಲ್ಲಿಗೆ ಏಕೆ ಬಂದಿದ್ದೀರಾ? ನಿಜವಾಗಿಯೂ ಶಿಕ್ಷಕಿ ಅಲ್ಲವಂತೆ” ಎಂದು ಗಲಾಟೆ ಮಾಡಿದರು. ಕೊನೆಗೆ, ಸುಶೀಲಮ್ಮ ಅವರ ತಾಯಿಯ ಸಹಾಯದಿಂದ ಆಧಾರ್ ಕಾರ್ಡ್ ಮತ್ತು ವೋಟರ್ ಕಾರ್ಡ್ ನಂಬರ್ ಪಡೆದಿದ್ದರು.

ಈ ವೇಳೆ, ಟೀ ಶಾಪ್ ನಡೆಸುತ್ತಿದ್ದ ಸಂದೀಪ್ ಮನೆಗೆ ಬಂದಾಗ, ಶಿಕ್ಷಕಿ ಸುಶೀಲಮ್ಮ ಅವರನ್ನು ಜಗಳಿಸಿ ಮನೆಗೆ ಒಳಹಾಕಿ ಭಯ ಮೂಡಿಸಿದರು. ಸುಶೀಲಮ್ಮ ತಮ್ಮನ್ನು ಶಿಕ್ಷಕಿ ಎಂದು ತಿಳಿಸಿದ್ದರೂ, ಸಂದೀಪ್ ಕೇಳದೆ ಅಡ್ಡಿ ಪಡಿಸಿದ್ದರು. ಭಯಗೊಂಡು ಅವರು ಪೋಲಿಸ್ ಕಂಟ್ರೋಲ್ ರೂಮ್ 112ಗೆ ಕರೆ ಮಾಡಿ ದೂರು ನೀಡಿದರು. ಪೋಲೀಸರು ಕೂಡಲೇ ಸಂದೀಪ್ ಮನೆಗೆ ತೆರಳಿ ಸುಶೀಲಮ್ಮ ಅವರನ್ನು ರಕ್ಷಿಸಿದರು. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯು ಸಂದೀಪ್ ಬಂಧಿತರಾಗಿಯೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.