ಬೆಂಗಳೂರು: ನಟಿ ರಮ್ಯಾಗೆ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ ಹಾಕಿದ ಆರೋಪಿಗಳ ಮೇಲೆ ಸಿಸಿಬಿ ಸೈಬರ್ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಒಟ್ಟು 11 ಆರೋಪಿಗಳ ವಿರುದ್ಧ 380 ಪುಟಗಳ ಚಾರ್ಜ್‌ಶೀಟ್ ದಾಖಲಾಗಿದೆ. ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳ ಮೊಬೈಲ್‌ಗಳು, ಸೋಷಿಯಲ್ ಮೀಡಿಯಾದ ಕಮೆಂಟ್‌ಗಳ ಸ್ಕ್ರೀನ್‌ಶಾಟ್‌ಗಳು, ವಿಡಿಯೋ ಲಿಂಕ್‌ಗಳು, ರಮ್ಯಾ ಅವರ ಸ್ಟೇಟ್‌ಮೆಂಟ್, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಮತ್ತು ಆರೋಪಿಗಳ ಸ್ವಯಂ ಹೇಳಿಕೆಗಳನ್ನು ಆಧಾರವಾಗಿ ಒಳಗೊಂಡಿದೆ.

ಪ್ರಕ್ರಿಯೆ 60 ದಿನಗಳ ಡೆಡ್‌ಲೈನ್ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಪೂರ್ಣಗೊಂಡಿದ್ದು, ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ. ಇನ್ನೂ 6 ಆರೋಪಿಗಳು ಪೊಲೀಸರು ಹಿಡಿಯಬೇಕಿದ್ದು, ಅವರ ಮೇಲೆ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸುವುದು ನಿರೀಕ್ಷೆಯಲ್ಲಿದೆ. ಅಶ್ಲೀಲ ಕಮೆಂಟ್ ಹಾಕಿದ ಇನ್ನೂ ನಾಲ್ವರು ಆರೋಪಿಗಳು ಬಿಡುಗಡೆ ಭಾಗ್ಯ ಪಡೆದಿಲ್ಲ. ಚಾರ್ಜ್‌ಶೀಟ್ ಸಲ್ಲಿಕೆಯೊಂದಿಗೆ ಟ್ರಯಲ್ ಶೀಘ್ರದಲ್ಲೇ ಆರಂಭವಾಗಲಿದೆ.
