ಬಿಗ್ ಬಾಸ್ ಈಸ್ ಬ್ಯಾಕ್! ಎಂದಿನಂತೆ ಅದೇ ಸಮಯದಲ್ಲಿ ಪ್ರಸಾರವಾಗಲಿದೆ ಶೋ

ಬಿಗ್ ಬಾಸ್ ಮರು ಆಗಮನ! ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಬಂದ್ ಆಗುತ್ತದೆ ಎಂದು ಆತಂಕಪಟ್ಟ ಫ್ಯಾನ್ಸ್‌ಗೆ ಖುಷಿಯ ಸುದ್ದಿ ಸಿಕ್ಕಿದೆ. ಶೋ ಸೋಮವಾರದಿಂದ ಶುಕ್ರವಾರ, ಪ್ರತಿ ರಾತ್ರಿ 9.30 ಕ್ಕೆ ನಿಮ್ಮ ಮನೆ ಟಿವಿಯಲ್ಲಿ ಪ್ರಸಾರವಾಗಲಿದೆ.

ಮೂರು ತಿಂಗಳ ಮನರಂಜನೆ ಪಡೆಯಲು ಉತ್ಸುಕವಾಗಿದ್ದ ಫ್ಯಾನ್ಸ್‌ಗೆ ಏಕಾಏಕಿ ಬಿಗ್ ಶಾಕ್ ಸಿಕ್ಕಿತ್ತು. ಏಕೆಂದರೆ, ಬಿಗ್ ಬಾಸ್ ಮನೆಗೆ ತಾತ್ಕಾಲಿಕವಾಗಿ ಬೀಗ ಹಾಕಲಾಗಿತ್ತು ಮತ್ತು ಸ್ಪರ್ಧಿಗಳು ಎಲ್ಲರೂ ಮನೆಯಿಂದ ಹೊರಬೀಳಬೇಕಾಯಿತು. ರೆಸಾರ್ಟ್‌ನಲ್ಲಿ ವಾಸಿಸುತ್ತಿದ್ದ ಸ್ಪರ್ಧಿಗಳು ಇದೀಗ ಮತ್ತೆ ಮನೆಗೆ ವಾಪಸ್ ಆಗಿದ್ದಾರೆ. ಈ ಮೂಲಕ, ಶೋ ಎಂದಿನಂತೆ ಮುಂದುವರಿಯಲಿದೆ.