ವಾಷಿಂಗ್ಟನ್: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದೇಶಿ ಸಿನಿಮಾಗಳ ಮೇಲೆ ಶೇ.100 ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಅಮೆರಿಕ ಹೊರಗಿನ ದೇಶಗಳು ತಮ್ಮ ಚಲನಚಿತ್ರ ಉದ್ಯಮವನ್ನು ಮಕ್ಕಳಿಂದ ಕ್ಯಾಂಡಿ ಕದಿಯುವಂತೆ ಕದ್ದಿವೆ ಎಂದು ಆರೋಪಿಸಿದ್ದಾರೆ.

ಟ್ರಂಪ್, ವಾಣಿಜ್ಯ ಇಲಾಖೆ ಮತ್ತು ಯುಎಸ್ ವ್ಯವಹಾರ ಪ್ರತಿನಿಧಿಗೆ ಈ ಕ್ರಮ ಜಾರಿಗೆ ಅಧಿಕಾರ ನೀಡಿದ್ದಾರೆ. ವಿದೇಶಗಳಲ್ಲಿ ತಯಾರಾಗುವ ಸಿನಿಮಾಗಳಿಂದ ಅಮೆರಿಕನ್ ಚಲನಚಿತ್ರೋದ್ಯಮ ವೇಗವಾಗಿ ಕುಸಿಯುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಜ್ಞರ ಪ್ರಕಾರ, ಈ ಕ್ರಮವು ಹಾಲಿವುಡ್‌ಗೆ ದೊಡ್ಡ ಹೊಡೆತವಾಗಲಿದೆ. ಡಿಸ್ನಿ, ಪ್ಯಾರಾಮೌಂಟ್, ವಾರ್ನರ್ ಬ್ರದರ್ಸ್ ಸೇರಿದಂತೆ ಅನೇಕ ಸ್ಟುಡಿಯೋಗಳು ವೆಚ್ಚ ಕಡಿತಕ್ಕಾಗಿ ವಿದೇಶಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದು, ಈಗ ಅದಕ್ಕೂ ತೊಂದರೆ ಎದುರಾಗಲಿದೆ.



