ತಲ್ವಾರ್ ಹಿಡಿದು ದೇವಾಲಯದ ಮುಂದೆ ಓಡಾಡಿದ ಅನ್ಯಕೋಮಿನ ಯುವಕ

ದಾವಣಗೆರೆ: ನಗರದ ಮಟ್ಟಿಕಲ್‌ ಪ್ರದೇಶದಲ್ಲಿರುವ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಅನ್ಯಕೋಮಿನ ಯುವಕನೊಬ್ಬ ತಲ್ವಾರ್ ಹಿಡಿದು ಓಡಾಡಿದ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ವೀಡಿಯೋ ಆಧರಿಸಿ ಆರ್‌ಎಂಸಿ ಠಾಣೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಯುವಕ ತಲ್ವಾರ್ ಹಿಡಿದು ಓಡಾಡಿದ ನಿಖರ ಕಾರಣ ಪತ್ತೆಯಾಗಬೇಕಿದೆ. ಇದರ ನಡುವೆ, ಆ ವ್ಯಕ್ತಿಯನ್ನು ಇನ್ನೂ ಬಂಧಿಸದಿರುವುದಕ್ಕೆ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣ ಬಂಧಿಸದಿದ್ದರೆ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.