ನವರಾತ್ರಿ ಹಬ್ಬದ ಸಂಭ್ರಮ ಎಲ್ಲೆಡೆ ಹಬ್ಬದ ಜೋರು ನಡೆಯುತ್ತಿರುವ ಮಧ್ಯ ಆಂಧ್ರಪ್ರದೇಶದ ಕೋಣಸೀಮಾ ಜಿಲ್ಲೆಯ ಒಂದು ದೇವಾಲಯದ ವಿಶೇಷ ಅಲಂಕಾರ ಗಮನ ಸೆಳೆಯುತ್ತಿದೆ.

ಶ್ರೀ ವಾಸವಿ ಕನ್ಯಕಾ ಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಬರೋಬ್ಬರಿ 4 ಕೋಟಿ ರೂ. ಮೌಲ್ಯದ ನೋಟುಗಳಿಂದ ದೇವಿಯನ್ನು ಅಲಂಕರಿಸಲಾಗಿದೆ. 5, 10, 20, 50, 100, 200 ಮತ್ತು 500 ರೂಪಾಯಿ ನೋಟುಗಳ ಕಟ್ಟುಗಳೊಂದಿಗೆ ದೇವಾಲಯದ ಆವರಣವನ್ನು ಅಲಂಕರಿಸಿರುವುದು ವಿಶೇಷ ಗಮನಸೆಳೆದಿದೆ.
