ಹೊನ್ನಾವರ ತಾಲೂಕಿನ ಸರಳಗಿ ದೇವರಗದ್ದೆಯಲ್ಲಿ ಎಲ್. ಐ. ಸಿ ಬಾಂಡ್ ವಿಚಾರದಲ್ಲಿ ನಡೆದ ಜಗಳದಲ್ಲಿ ಮಹಿಳೆಗೆ ಹಲ್ಲೆ ಮಾಡಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರಳಗಿ ದೇವರಗದ್ದೆಯ ಮಂಗಲಾ ರಾಜು ನಾಯ್ಕ ಇವರು ಎಲ್. ಐ. ಸಿ ಎಜೇಂಟರಾಗಿದ್ದು, ಇವರು ಮೂರು ವರ್ಷದ ಹಿಂದೆ ಸುಳಗೋಡ, ಗಾವೇರಿಯ ಸುಬ್ರಹ್ಮಣ್ಯ ನಾರಾಯಣ ಗೌಡ ಇವರು ಎಲ್. ಐ. ಸಿ ಪಾಲಿಸಿ ಮಾಡಿದ್ದು, ಅದರ ಮೊದಲ ಕಂತು ಮಂಗಲಾ ಅವರೆ ತುಂಬಿರುತ್ತಾರೆ. ರವಿವಾರ ಸುಬ್ರಹ್ಮಣ್ಯ ಗೌಡ ಕರೆಮಾಡಿ ಬ್ಯಾಂಕಿಗೆ ಕೊಡಲು ಎಲ್. ಐ. ಸಿ ಬಾಂಡ್ ಕೇಳಿರುತ್ತಾನೆ. ಮೊದಲ ಕಂತಿನ ಹಣ ಕೊಟ್ಟು ಬಾಂಡ್ ತೆಗೆದುಕೊಂಡು ಹೋಗಲು ತಿಳಿಸಿರುತ್ತಾರೆ.

ಅದಕ್ಕೆ ಸಿಟ್ಟಾದ ಆತ ರವಿವಾರ ರಾತ್ರಿ ಮರಬಳ್ಳಿಯ ರಾಜೇಶ್ ಗಣಪತಿ ನಾಯ್ಕ ಜೊತೆ ಅವರ ಮನೆಗೆ ತೆರಳಿ ಅವಾಚ್ಯವಾಗಿ ಬೈದು ಮಾನಕ್ಕೆ ಕುಂದುಂಟು ಮಾಡಿರುತ್ತಾನೆ. ತಪ್ಪಿಸಲು ಬಂದ ಅವರ ಪತಿ ರಾಜು ಸುಬ್ರಾಯ ನಾಯ್ಕ ಇವರಿಗೂ ಹಲ್ಲೆ ಮಾಡಿರುತ್ತಾರೆ. ಅಲ್ಲಿರುವ ಕಾರು ಇನ್ನಿತರ ವಸ್ತುಗಳಿಗೂ ಹಾನಿ ಉಂಟುಮಾಡಿ, ಲಕ್ಷಾಂತರ ನಷ್ಟ ಮಾಡಿ, ಎಲ್. ಐ. ಸಿ. ಬಾಂಡ್ ಕೊಡದೆ ಇದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ. ಇವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮಂಗಲಾ ರಾಜು ನಾಯ್ಕ ಇವರು ದೂರು ನೀಡಿರುತ್ತಾರೆ.
ಇನ್ನು ಘಟನೆ ಕುರಿತಂತೆ ಪ್ರತಿ ದೂರು ದಾಖಲಾಗಿದ್ದು,ತಾಲೂಕಿನ ಸರಳಗಿ ದೇವರಗದ್ದೆಯ ರಾಜು ಸುಬ್ರಾಯ ನಾಯ್ಕ ಇವರು ಕಾನಗೋಡಿನ ಸುಬ್ರಹ್ಮಣ್ಯ ನಾರಾಯಣ ಗೌಡ ಇವರಿಗೆ ಹಣ ಕೊಡುವ ವಿಷಯಕ್ಕೆ ಮಾತಿಗೆ ಮಾತು ಬೆಳೆದಿತ್ತು, ಅದನ್ನು ಕೇಳಲು ಸರಳಗಿ ದೇವರಗದ್ದೆಯ ಅವರ ಮನೆ ಹತ್ತಿರ ಹೋದಾಗ, ಆತನು ಅವಾಚ್ಯವಾಗಿ ಬೈದು ಕಬ್ಬಿಣದ ಸರಳಿನಿಂದ ಹೊಡೆದು ಹಲ್ಲೆ ಮಾಡಿರುತ್ತಾನೆ. ನಾವು ಕೂಗಿ ಕೊಂಡಾಗ ಅಕ್ಕಪಕ್ಕದವರು ಬಂದು ತಪ್ಪಿಸಿರುತ್ತಾರೆ. ನಾವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತೇವೆ. ರಾಜು ನಾಯ್ಕ ಇವರ ಮೇಲೆ ಕಾನೂನು ಕ್ರಮ ತೆಗೆದು ಕೊಳ್ಳಬೇಕು ಎಂದು ಮರಬಳ್ಳಿಯ ರಾಜೇಶ್ ಗಣಪತಿ ನಾಯ್ಕ ಇವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ



