ಬೆಂಗಳೂರು: ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ (17 ಆರೋಪಿಗಳು ಇಂದು ಸಿಸಿಎಚ್ 64 ನ್ಯಾಯಾಲಯದಲ್ಲಿ ಹಾಜರಾಗಲಿದ್ದಾರೆ.

ಎಲ್ಲಾ ಆರೋಪಿಗಳು ಹಾಜರಾದ ಬಳಿಕ ಚಾರ್ಜ್ ಫ್ರೇಮಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಪ್ರತಿ ಆರೋಪಿಗೆ ಅವರ ಮೇಲೆ ದಾಖಲಾಗಿರುವ ಐಪಿಸಿ ಸೆಕ್ಷನ್‌ಗಳನ್ನು ನ್ಯಾಯಾಧೀಶರು ಓದಿ ಕೇಳಿಸಲಿದ್ದಾರೆ. ಉದಾಹರಣೆಗೆ, ಎ-1 ಆರೋಪಿ ಪವಿತ್ರಾ ಗೌಡ ವಿರುದ್ಧ ಕೊಲೆ (IPC 302), ಅಪಹರಣ (IPC 364), ಸಾಕ್ಷಿ ನಾಶ (IPC 202) ಆರೋಪಗಳು ದಾಖಲಾಗಿವೆ. ಈ ಆರೋಪಗಳನ್ನು ಒಪ್ಪಿಕೊಳ್ಳುತ್ತೀರಾ ಅಥವಾ ತಳ್ಳಿಹಾಕುತ್ತೀರಾ ಎಂದು ನ್ಯಾಯಾಧೀಶರು ಪ್ರಶ್ನಿಸುವರು.
ಹೀಗೆಯೇ ಎಲ್ಲಾ 17 ಮಂದಿಯ ಮೇಲಿನ ಆರೋಪಗಳನ್ನು ಪ್ರತ್ಯೇಕವಾಗಿ ವಾಚಿಸಿ, ಅವರ ಹೇಳಿಕೆಗಳನ್ನು ದಾಖಲಿಸುವ ಪ್ರಕ್ರಿಯೆ ನಡೆಯಲಿದೆ. ಇದಾದ ನಂತರ, ದೋಷಾರೋಪಗಳನ್ನು ನಿಗದಿಪಡಿಸಿ, ಮುಂದಿನ ದಿನ ಟ್ರಯಲ್ ದಿನಾಂಕವನ್ನು ನ್ಯಾಯಾಲಯ ಘೋಷಿಸುವ ನಿರೀಕ್ಷೆಯಿದೆ. ಇದೇ ವೇಳೆ, ಆರೋಪಿಗಳಿಗೆ ಹಾಸಿಗೆ–ತಲೆದಿಂಬು ಸೇರಿದಂತೆ ಸೌಲಭ್ಯ ನೀಡುವ ವಿಚಾರವೂ ಇಂದು ಚರ್ಚೆಗೆ ಬರುವ ಸಾಧ್ಯತೆ ಇದೆ.



