500 ಕಾರು ಬಾಡಿಗೆ ಪಡೆದು ಗಿರವಿಗೆ ಇಟ್ಟ ಭೂಪ

ಬಳ್ಳಾರಿ, ಸೆಪ್ಟೆಂಬರ್ 25: ಈ ಕಾಲದಲ್ಲಿ ಬಾಡಿಗೆ ವಾಹನಗಳ ಟ್ರೆಂಡ್‌ ಜೋರಾಗಿದೆ. ವಿಶೇಷವಾಗಿ ಸೆಲ್ಫ್‌ ಡ್ರೈವ್‌ಗೆ ವಾಹನ ಪಡೆದುಕೊಳ್ಳುವವರೇ ಹೆಚ್ಚಾಗಿದ್ದಾರೆ. ಹೀಗಾಗಿ ಅನೇಕ ವಾಹನ ಮಾಲಕರು ಯಾರಾದರೂ ಕೇಳಿದರೆ ಬಾಡಿಗೆಗೆ ಕೊಡುತ್ತಿದ್ದಾರೆ. ಆದರೆ, ಬಳ್ಳಾರಿಯಲ್ಲೊಬ್ಬ ವ್ಯಕ್ತಿ ಇಂಥ ಮಾಲಕರಿಗೆ ಭರ್ಜರಿ ಶಾಕ್ ನೀಡಿದ್ದಾರೆ. ಯಾರ್ಯಾರಿಗೆ ಬಾಡಿಗೆಗೆ ವಾಹನ ನೀಡಿದರೂ, ಆ ವಾಹನಗಳು ಮತ್ತೊಬ್ಬರ ಬಳಿ ಗಿರವಿಯಾಗಿ ಹೋಗಬಹುದು ಅನ್ನುವುದನ್ನು ಆತ ತನ್ನ ಕೃತ್ಯದಿಂದಲೇ ಸಾಬೀತುಪಡಿಸಿದ್ದಾನೆ.