ಇತ್ತೀಚೆಗಷ್ಟೇ ‘ಘಾಟಿ’ ಸಿನಿಮಾದ ಮೂಲಕ ಸೌಂಡ್ ಮಾಡಿದ ಅನುಷ್ಕಾ ಶೆಟ್ಟಿ, ಸೋಶಿಯಲ್ ಮೀಡಿಯಾ ಫಾಲೋವರ್ಸ್‌ಗಾಗಿ ಶಾಕ್ ನೀಡಿದ್ದಾರೆ. ಅವರು ಸೋಶಿಯಲ್ ಮೀಡಿಯಾದಿಂದ ದೂರವಾಗುವುದರ ಬಗ್ಗೆ ಹ್ಯಾಂಡ್‌ರೈಟ್ ಪತ್ರ ಬರೆದಿದ್ದು, ಅದರ ಕಾರಣವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಬೇರೆ ನಟಿಯರಿಗೆ ಹೋಲಿಸಿದರೆ ಅನುಷ್ಕಾ ಶೆಟ್ಟಿ ಸೋಶಿಯಲ್ ಮೀಡಿಯಾಗಳಿಂದ ಅಂತರ ಕಾಯ್ದುಕೊಂಡೇ ಬಂದವರು. ಸಿನಿಮಾಗೆ ಸಂಬಂಧಪಟ್ಟ ಮಾಹಿತಿಯನ್ನಷ್ಟೇ ಆಗಾಗ ಹಂಚಿಕೊಳ್ಳುತ್ತಿದ್ದರು. ವೈಯಕ್ತಿಕ ಪೋಸ್ಟ್ ಹಾಕುವುದು ವಿರಳಾತಿವಿರಳ. ಇದೀಗ ಸೋಶಿಯಲ್ ಮೀಡಿಯಾದಿಂದ ದೂರಾಗುವ ಕುರಿತು ಮಾಹಿತಿ ಹಂಚಿಕೊಂಡಿರುವ ಅನುಷ್ಕಾ “ಸೋಶಿಯಲ್ ಮೀಡಿಯಾದಿಂದ ಸ್ವಲ್ಪ ದೂರ ಸರಿಯುತ್ತಿದ್ದೇನೆ. ಮೊಬೈಲ್ ಸ್ಕ್ರೋಲಿಂಗ್ ಹೊರತಾಗಿಯೂ ಜಗತ್ತಿನ ಜೊತೆ ಸಂಪರ್ಕ ಸಾಧಿಸಬೇಕಾಗಿದೆ.” ಶೀಘ್ರದಲ್ಲೇ ಮತ್ತೆ ನಿಮ್ಮೊಂದಿಗೆ ಸೇರಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ.

ಸಾಮಾನ್ಯವಾಗಿ ಅನುಷ್ಕಾ ಸಿನಿಮಾದ ಹೊರತಾಗಿ ಹೆಚ್ಚು ಸುದ್ದಿಯಾಗೋದಿಲ್ಲ. ಇದೀಗ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದೂ ಅಪರೂಪವಾಗಿದೆ. ಮತ್ತೆ ಪ್ರಭಾಸ್ ಜೊತೆ ಜೋಡಿಯಾಗಿ ನಟಿಸುವ ಸುದ್ದಿ ಕೇಳಿಬರುತ್ತಿದೆ. ಆದರೆ ಅಂಥಹ ಯಾವ ಪ್ರಾಜೆಕ್ಟ್ ಕೂಡ ಮುನ್ನಲೆಗೆ ಬಂದಿಲ್ಲ. ಇದೀಗ ಸೋಶಿಯಲ್ ಮೀಡಿಯಾದಿಂದ ಕೊಂಚ ಬ್ರೇಕ್ ತೆಗೆದುಕೊಳ್ಳುವ ನಿರ್ಧಾರವನ್ನು ಅವರು ಘೋಷಿಸಿದ್ದಾರೆ.
