ಆರೋಪಿ ನಟ ದರ್ಶನ್ ಮನೆ ದಾಳಿ: 3 ಲಕ್ಷ ನಗದು ಕಳ್ಳತನ

ಕೊಲೆ ಪ್ರಕರಣದಲ್ಲಿ ಜೈಲಿಗೆ ಸೇರಿರುವ ನಟ ದರ್ಶನ್‌ ಮನೆಯಲ್ಲೇ ಸುಮಾರು 3 ಲಕ್ಷ ರೂ. ನಗದು ಕಳ್ಳತನವಾಗಿದೆ.

ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ವಾಸಿಸುತ್ತಿರುವ ಹೊಸಕೆರೆಹಳ್ಳಿಯ ಪ್ರೆಸ್ಟಿಜ್ ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ ನಡೆದಿದೆ. ಕಳ್ಳರು ಬೆಡ್‌ರೂಮ್‌ನಲ್ಲಿದ್ದ ಸುಮಾರು 3 ಲಕ್ಷ ರೂ. ನಗದು ಕದ್ದೊಯ್ದಿದ್ದಾರೆ.

ಕಳ್ಳತನದ ಪ್ರಕರಣ ಸಂಬಂಧ, ವಿಜಯಲಕ್ಷ್ಮಿ ದರ್ಶನ್‌ ಮ್ಯಾನೇಜರ್ ನಾಗರಾಜ್ ಮೂಲಕ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೆ.4ರಿಂದ ಸೆ.8ರೊಳಗೆ ಹಣ ಕಳ್ಳತನವಾಗಿದೆ ಮತ್ತು ಮನೆಯೊಳಗಿನ ವ್ಯಕ್ತಿಗಳ ಮೇಲೂ ಅನುಮಾನ ವ್ಯಕ್ತಪಡಿಸಲಾಗಿದೆ ಎಂದು ದೂರುದಲ್ಲಿ ಉಲ್ಲೇಖಿಸಲಾಗಿದೆ.ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.