ಮಕ್ಕಳ ನಿರೀಕ್ಷೆಯ ನಡುವೆ ಭಾವನಾ ರಾಮಣ್ಣಿಗೆ ತೀವ್ರ ಆಘಾತ

ಕನ್ನಡದ ಜನಪ್ರಿಯ ನಟಿ ಭಾವನಾ ರಾಮಣ್ಣ ವಯಸ್ಸು 40 ಆದರೂ ಮದುವೆ ಆಗಿಲ್ಲ, ಆದರೆ ಐವಿಎಫ್ ತಂತ್ರಜ್ಞಾನದ ಮೂಲಕ ನಟಿ ಭಾವನಾ ರಾಮಣ್ಣ ಗರ್ಭ ಧರಿಸಿದ್ದರು. ಅವರು ಅವಳಿ ಮಕ್ಕಳಿಗೆ ತಾಯಿ ಆಗುವವರಿದ್ದರು. ಈ ವಿಷಯವನ್ನು ಅವರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದ ನಟಿಗೆ ಇದೀಗ ಆಘಾತವಾಗಿದೆ.

ಭಾವನಾ ರಾಮಣ್ಣ ಕನ್ನಡ ಚಿತ್ರರಂಗದ ಜನಪ್ರಿಯ ನಟಿ , ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ನಟಿ ಭಾವನಾ ರಾಮಣ್ಣ ಐವಿಎಫ್ ತಂತ್ರಜ್ಞಾನದ ಮೂಲಕ ಗರ್ಭಧರಿಸಿದ್ದರು . ಈ ಕುರಿತಾದ ಟೀಕೆಗಳಿಗೆ ನೇರ ಉತ್ತರ ನೀಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

ಇತ್ತೀಚೆಗೆ ನಡೆದ ಭಾವನಾ ಅವರ ಸೀಮಂತ ಕಾಯಕ್ರಮದಲ್ಲಿ ಅವರ ಆಪ್ತರು ಮತ್ತು ಕುಟುಂಬದ ಸದಸ್ಯರು ಭಾಗವಹಿಸಿ ಶುಭಕೋರಿದ್ದರು.

ಆದರೆ ಭಾವನಾ ರಾಮಣ್ಣ ಅವರಿಗೆ ಪ್ರಸವದ ಏಳನೇ ತಿಂಗಳಲ್ಲಿ ಆಘಾತ ಎದುರಾಯಿತು. ಗರ್ಭದ ಸ್ಕ್ಯಾನಿಂಗ್‌ನಲ್ಲಿ, ಅವರ ಅವಳಿ ಮಕ್ಕಳಲ್ಲಿ ಒಂದು ಮಗುವಿಗೆ ಸಮಸ್ಯೆ ಕಾಣಿಸಿಕೊಂಡಿತು.

ಹೀಗಾಗಿ ವೈದ್ಯರ ಸಲಹೆಯಂತೆ ಎಂಟನೇ ತಿಂಗಳಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಲಾಯಿತು. ಅವಳಿ ಮಕ್ಕಳಲ್ಲಿ ಒಂದು ಮಗು ಮೃತಪಟ್ಟಿದ್ದು, ಇನ್ನೊಬ್ಬ ಮಗು ಆರೋಗ್ಯವಂತವಾಗಿದೆ. ಆರೋಗ್ಯವಂತ ಹೆಣ್ಣುಮಗುವಿನೊಂದಿಗೆ ಭಾವನಾ ರಾಮಣ್ಣ ಕೂಡ ಪ್ರಸ್ತುತ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.