ತಾಲೂಕು ಸಾಧಕ ಶಿಕ್ಷಕ ಪ್ರಶಸ್ತಿ ಪ್ರಕಟ   

ಹೊನ್ನಾವರ: 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ನೀಡುವ ತಾಲೂಕು ಸಾಧಕ ಶಿಕ್ಷಕ ಪ್ರಶಸ್ತಿಗೆ ತಾಲೂಕಿನ 10 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.

 ಕಕ್ಕಾರ ನಂ.1 ಸ.ಹಿ.ಪ್ರಾ.ಶಾಲೆಯ ಪದೋನ್ನತ ಮುಖ್ಯಾಧ್ಯಾಪಕಜಟ್ಟಿ ನಾರಾಯಣ ಮುಕ್ರಿ, ಸ.ಕಿ.ಪ್ರಾ. ಶಾಲೆ ಗುಡ್ಡಿನಕಟ್ಟು ಶಿಕ್ಷಕ ವಿನಾಯಕ ಚಂದ್ರಕಾಂತ ನಾಯ್ಕ, ಸ.ಕಿ.ಪ್ರಾ. ಶಾಲೆ ಕೆರೆಮನೆ ಕಚ್ಚರಿಕೆ ಶಿಕ್ಷಕ ಸುಬ್ರಾಯ ಹನುಮಂತ ಭಂಡಾರಿ, ಸ.ಹಿ.ಪ್ರಾ. ಶಾಲೆ ಸ್ಥಿತಿಗಾರ ಶಿಕ್ಷಕ ಮಂಜುನಾಥ ಎಸ್. ಹೆಗಡೆ, ಸ.ಹಿ.ಪ್ರಾ. ಶಾಲೆ, ನಗರಬಸ್ತಿಕೇರಿ ಶಿಕ್ಷಕ ಅಲಿಅಕ್ಷರ ಮೊಹಿದ್ದಿನ್ ಸಿದ್ದಿ ಬಾಪಾ (ಉರ್ದು), ಸ.ಹಿ.ಪ್ರಾ. ಶಾಲೆ, ಮಾವಿನಕುರ್ವೆ ಶಿಕ್ಷಕಿ ವಿಮಲಾ ನಾರಾಯಣ ಶೇಟ್, ಸ.ಹಿ.ಪ್ರಾ. ಶಾಲೆ, ಹೊಸಾಡ ಶಿಕ್ಷಕಿ ಮಹಾದೇವಿ ಶಂಭು ಭಟ್ಟ, ಸ.ಹಿ.ಪ್ರಾ. ಶಾಲೆ ಚಂದಾ ವರ ಶಿಕ್ಷಕಿ ವಿದ್ಯಾ ಈಶ್ವರ ನಾಯ್ಕ, ಸ.ಹಿ.ಪ್ರಾ. ಶಾಲೆ ಕರ್ಕಿ ಶಿಕ್ಷಕಿ ತಾರಾ ನಾರಾಯಣ ನಾಯ್ಕ, ಸ.ಹಿ.ಪ್ರಾ. ಶಾಲೆ ಮಲ್ಲುಕುರ್ವಾ ಶಿಕ್ಷಕಿ ಸುನೀತಾ ಎಂ. ಕ್ಯಾನಭಾಗ ಇವರು ತಾಲೂಕಿನ ಸಾಧಕ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಗೊಂಡಿದ್ದಾರೆ. ಇವರಿಗೆ ಸೆ.5ರಂದು ತಾಲೂಕಿನ ನಾಮಧಾರಿ ವಿದ್ಯಾರ್ಥಿಭವನದಲ್ಲಿ ನಡೆಯುವ ಶಿಕ್ಷಕರ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅಧ್ಯಕ್ಷ ಎಂ.ಜಿ.ನಾಯ್ಕ ತಿಳಿಸಿದ್ದಾರೆ.