ಆ.30, 31ರಂದು 2025-26ನೇ ಸಾಲಿನ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ

ಹೊನ್ನಾವರ ಆ.23 : ಇದೇ ಆ.30 ಮತ್ತು 31ರಂದು ಎರಡು ದಿನಗಳ ಕಾಲ ಪಟ್ಟಣದ ಪ್ರಭಾತನಗರ ನ್ಯೂ ಇಂಗ್ಲೀಷ್‌ ಸ್ಕೂಲ್‌ ಕ್ರೀಡಾಂಗಣದಲ್ಲಿ 2025-26ನೇ ಸಾಲಿನ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.

ದಿ. 30ರಂದು ಬೆಳಿಗ್ಗೆ 9.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್‌ ವೈದ್ಯ ಕ್ರೀಡಾಕೂಟ ಉದ್ಘಾಟಿಸಲಿದ್ದು, ಕುಮಟಾ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ  ಮತ್ತು ಇದು ಮುಕ್ತ ಸ್ಪರ್ಧೆಯಾಗಿದ್ದು ತಾಲೂಕಿನ ಯಾವುದೇ ಸ್ಪರ್ಧಾಳುಗಳು ಭಾಗವಹಿಸಲು ಅವಕಾಶ ಇರುತ್ತದೆ ಎಂದು ತಿಳಿಸಿದ್ದಾರೆ.


ಪುರುಷರ ವಿಭಾಗದಲ್ಲಿ :
100ಮೀ, 200ಮೀ, 400ಮೀ, 800ಮೀ, 1500ಮೀ, 5000ಮೀ. 10000ಮೀ, ಉದ್ದಜಿಗಿತ, ಎತ್ತರಜಿಗಿತ, ಟ್ರಿಪಲ್‌ಜಂಪ್, ಗುಂಡುಎಸೆತ, ಜಾವಲಿನ್ ಎಸೆತ, ಡಿಸ್ಕಸ್‌ಎಸೆತ, 110ಮೀ ಹರ್ಡಲ್ಸ್, 4*100ಮೀ ರಿಲೇ, 4*400ಮೀ ರಿಲೇ. ಗುಂಪು ಸ್ಪರ್ಧೆಗಳು-ವಾಲಿಬಾಲ್, ಕಬ್ಬಡ್ಡಿ, ಖೋಖೋ, ಪುಟ್‌ಬಾಲ್, ಥೋಬಾಲ್, ಯೋಗ ಕ್ರೀಡೆಗಳನ್ನು ಒಳಗೊಂಡಿದೆ..


ಮಹಿಳೆಯರ ವಿಭಾಗ : 100ಮೀ, 200ಮೀ, 400ಮೀ, 800ಮೀ, 1500ಮೀ, 3000ಮೀ . ಉದ್ದಜಿಗಿತ, ಎತ್ತರಜಿಗಿತ, ಟ್ರಿಪಲ್‌ಜಂಪ್, ಗುಂಡುಎಸೆತ, ಜಾವಲಿನ್ ಎಸೆತ, ಡಿಸ್ಕಸ್‌ ಥ್ರೋ, 100ಮೀ ಹರ್ಡಲ್ಸ್, 4*100ಮೀ ರಿಲೇ, 4*400ಮೀ ರಿಲೇ. ಗುಂಪು ಸ್ಪರ್ಧೆಗಳು ವಾಲಿಬಾಲ್, ಕಬ್ಬಡ್ಡಿ, ಖೋಖೋ, ಥೋಬಾಲ್, ಯೋಗ ಕ್ರೀಡೆಗಳನ್ನು ಒಳಗೊಂಡಿದೆ..

ಭಾಗವಹಿಸುವ ಕ್ರೀಡಾ ಪಟುಗಳು ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಯುವಜನ ಕ್ರೀಡಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ.