ಯಾದಗಿರಿ: ಆಸ್ತಿ ಪರಭಾರೆ ಪ್ರಕರಣ – ಪೌರಾಯುಕ್ತ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್

ಯಾದಗಿರಿ: ಮಹಿಳೆಯೊಬ್ಬರಿಗೆ ಸೇರಿದ್ದ ಜಮೀನಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಆಸ್ತಿಯನ್ನು ಬೇರೊಬ್ಬರಿಗೆ ಪರಭಾರೆ ಮಾಡಿದ್ದ ಆರೋಪದಡಿ ಸುರಪುರ ನಗರಸಭೆಯ ಹಿಂದಿನ ಪೌರಾಯುಕ್ತ ಸೇರಿ ನಾಲ್ವರ ವಿರುದ್ಧ ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಹೆಮ್ಮಡಗಿ ನಿವಾಸಿ ಝಾನ್ಸಿಲಕ್ಷ್ಮಿ ಈ ಬಗ್ಗೆ ದೂರು ನೀಡಿದ್ದರು. ನಗರಸಭೆಯ ಹಿಂದಿನ ಆಯುಕ್ತ ಜೀವನಕುಮಾರ್ (ಹಾಲಿ ಶಹಾಪುರ ನಗರಸಭೆ ಆಯುಕ್ತ), ನಿವೃತ್ತ ಅಧಿಕಾರಿ ಎಜಾಜ್ ಹುಸೇನ್, ಕರ ವಸೂಲಿಗಾರ (ಹಾಲಿ ಕಂದಾಯ ಅಧಿಕಾರಿ) ವೆಂಕಟೇಶ ಹಾಗೂ ಜಯಶೀಲ ಮುರುಳೀಧರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.