ಶ್ರೀ ಕ್ಷೇತ್ರ ಧರ್ಮಸ್ಥಳ  ಭಕ್ತಾಭಿಮಾನಿ ವೃಂದದವರಿಂದ ಸಾರ್ವಜನಿಕರ ಸಭೆ

ಹೊನ್ನಾವರ ಆ.21 : ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರದ ಪಿತೂರಿ ಮಾಡಿರುವ ಸಮಾಜಘಾತುಕರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪಟ್ಟಣದ ಎಂ. ಪಿ. ಇ. ಸೊಸೈಟಿಯ ಎಸ್‌. ಡಿ.ಎಂ.ಪದವಿ ಕಾಲೇಜಿನ ಆರ್. ಎಸ್. ಹೆಗಡೆ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ  ಭಕ್ತಾಭಿಮಾನಿ ವೃಂದದವರಿಂದ ಸಾರ್ವಜನಿಕರ ಸಭೆ ಜರುಗಿತು.

ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಪತ್ರಕರ್ತ ಜಿ.ಯು.ಭಟ್ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ಭಾರತದ ಪ್ರತಿಷ್ಠಿತ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಪ್ರಮುಖವಾಗಿರುವ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದೇವಾಲಯ ಹಲವು ದಶಕಗಳಿಂದ ಸಮಾಜಮುಖಿ ಕಾರ್ಯಗಳ ಮೂಲಕ ಧಾರ್ಮಿಕ ಶ್ರದ್ಧೆಯ ಸಂಕೇತವಾಗಿ ಗುರುತಿಸಿಕೊಂಡಿದೆ. ಧಾರ್ಮಿಕ ಕಾರ್ಯಕ್ರಮಗಳು, ಕ್ಷೇತ್ರಗಳ ಜೀರ್ಣೋದ್ಧಾರ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಿಂದ ಧರ್ಮಸ್ಥಳವು ಕೋಟ್ಯಂತರ ಭಕ್ತರ ಭರವಸೆಯ ಕೇಂದ್ರವಾಗಿದೆ.ಇಂತಹ ಧಾರ್ಮಿಕ ಸ್ಥಳದಲ್ಲಿ  ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಕೆಲವು ವಿರೋಧಿ ಶಕ್ತಿಗಳು ಸಂಘಟಿತವಾಗಿ ಶ್ರೀ ಕ್ಷೇತ್ರದ ಬಗ್ಗೆ ಮತ್ತು ಪೂಜ್ಯ ಖಾವಂದರ ಕುಟುಂಬದ ಕುರಿತು ಅಪಪ್ರಚಾರ ನಡೆಸುತ್ತಿದ್ದು ಧರ್ಮಸ್ಥಳದ ಗೌರವ ಹಾಗೂ ಘನತೆಗೆ ಧಕ್ಕೆ ತರುವಂತ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ಧರ್ಮಸ್ಥಳದ ಇತಿಹಾಸವನ್ನು ತಿಳಿಸಿದರು. ಜೊತೆಗೆ ಎಸ್.ಡಿ.ಎಮ್ .ವಿದ್ಯಾ ಸಂಸ್ಥೆಯಲ್ಲಿ ಕಲಿತವರಿಗೆ ನೌಕರಿ ಬೇಗ ಸಿಗುವಂತಾಗಿದೆ.ಕಾರಣ ಅದೊಂದು ಬ್ರ್ಯಾಂಡ್ ಆಗಿ ರೂಪುಗೊಂಡಿದೆ. ಜನರಿಂದ ಪಡೆದ ಹಣವನ್ನು ಜನರಿಗೆ ನೀಡುತ್ತಿದ್ದಾರೆ. ಧರ್ಮಸ್ಥಳದ ಪರಂಪರೆಯಲ್ಲಿ ಯಾರಿಗೂ ತೊಂದರೆ ಕೊಡುವ ಆಲೋಚನೆ ಇಲ್ಲ.‌ಹೆಗ್ಗಡೆ ವಿರೋಧಿ ಮಹೇಶ್ ತಿಮರೋಡಿ ಧರ್ಮಸ್ಥಳದ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ವಿಚಾರ ಬಂದಾಗ ಅದಕ್ಕೆ ಹೆಗ್ಗಡೆ ವಿರೋಧಿಸಿದರು. ಅದರ ಪರಿಣಾಮವೇ ಈ ಕೇಸ್. ಅಲ್ಲದೆ ರಾಜ್ಯಸಭೆಯ ಸದಸ್ಯರಾದ ನಂತರದಲ್ಲಿ  ಈ ಕೇಸ್ ದಾಖಲಾಗಿದೆ ಎಂದರು.  ಸೋಶಿಯಲ್ ಮೀಡಿಯಾದಲ್ಲಿ ಬಂದ ನಂತರ ಪ್ರತಿಕೆಗಳಿಗೆ ಮಾಹಿತಿ ಸಿಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಬಂದ ಸುದ್ದಿಯನ್ನ ನಂಬಿಕೊಂಡು ಎಲ್ಲ ವಿರೋಧಿಗಳು ಸೇರಿಕೊಂಡು ಧರ್ಮಸ್ಥಳದ ಮೇಲೆ ಗುಂಡಿ ತೋಡಿದ್ರು.

ಮುಖಮುಚ್ಚಿಕೊಂಡವನಿಂದ ಪ್ರಪಂಚಕ್ಕೆ ಮುಖಪರಿಚಯ ಇರುವ ಹೆಗ್ಗಡೆಯವರ ಮೇಲೆ ಕೇಸ್ ದಾಖಲಿಸಿದ್ದು ದುರಂತ ಎಂದು ನುಡಿದರು.

ಎಂ.ಪಿ.ಇ.ಸೊಸೈಟಿ ಸದಸ್ಯ ಹಾಗೂ ಧರ್ಮಸ್ಥಳದ ನಿಕಟಪೂರ್ವ ವ್ಯಕ್ತಿ ಚಂದ್ರಶೇಖರ್ ಗೌಡ ಮಾತನಾಡಿ ಅನ್ನದಾನ , ವಿದ್ಯಾದಾನ ಮತ್ತು ಅಭಯದಾನ ವ್ಯವಸ್ಥಿತವಾಗಿ ನಡೆಯುತ್ತಿದೆ. ಲಕ್ಷಾಂತರ ಜನಕ್ಕೆ ಸಾಂತ್ವನ‌ ಹೇಳುವವರಿಗೆ ಸಾಂತ್ವನ‌ ಹೇಳುವ ಪರಿಸ್ಥಿತಿ ಬಂದಿದ್ದು ದುರ್ದೈವ. ೭೮ ವರ್ಷದಲ್ಲಿರುವ ಹೆಗ್ಗಡೆಯವರು ೬೦ ವರ್ಷಗಳಿಂದ ಜನಸೇವೆಯಲ್ಲಿದ್ದಾರೆ.ಅಂತಹವರಿಗೆ ಇಂತಹ ಪರಿಸ್ಥಿತಿ ಬಂದಿದ್ದು ಖೇಧಕರ ಎಂದರು.ಹೆಗ್ಗಡೆಯವರು ಬದುಕಿಸಲು ಇರುವವರು ಹೊರತು ಸಾಯಿಸಲಿಕ್ಕೆ ಅಲ್ಲ ಎಂದು ನುಡಿದರು.

.ಕರ್ನಾಟಕ ಸರ್ಕಾರ ಧರ್ಮಸ್ಥಳ ಪರವಾಗಿ ನಿಲ್ಲಬೇಕು.ಹೆಗ್ಗಡೆಯವರ ಮೇಲೆ ಆಗಿರುವ ಷಡ್ಯಂತ್ರವನ್ನು ಬೇಧಿಸಬೇಕು. ಅಪರಾಧಿ‌ಗಳಿಗೆ ಶಿಕ್ಷೆ ಆಗಬೇಕು.   ಸಭೆಯ ಬಳಿಕ ಖಂಡನಾ ನಿರ್ಣಯವನ್ನು  ತೆಗೆದುಕೊಳ್ಳಲಾಯ್ತು. ನಿರ್ಣಯವನ್ನು ತಾಲೂಕು ದಂಡಾಧಿಕಾರಿಗಳಿಗೆ ಸಲ್ಲಿಸಲಾಯ್ತು.

ಜಿ.ಪಿ.ಹೆಗಡೆ,ರಾಜು ನಾಯ್ಕ,ಸುರೇಶ್ ಶೇಟ್, ಎಸ್.ಎಮ್.ಭಟ್ , ವಿಜಯ್ ಕಾಮತ್ ವೇದಿಕೆ ಮೇಲೆ ಉಪಸ್ಥಿತರಿದ್ದರು.ತಾಲೂಕಿನ ಧರ್ಮಸ್ಥಳ ದೇವಾಲಯದ ಭಕ್ತರು, ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಸೇರಿದ್ದರು.

ಕೃಷ್ಣಮೂರ್ತಿ ಭಟ್ ,ಶಿವಾನಿ ಸ್ವಾಗತಿಸಿ ,ಪ್ರಾಸ್ತಾವಿಕ ನುಡಿಗಳನ್ನಾಡಿದರು.ಪ್ರಶಾಂತ್ ಹೆಗಡೆ ನಿರೂಪಿಸಿದರು.