ಬೆಂಗಳೂರು: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಬಾಗಲಕೋಟೆ ಜಿಲ್ಲೆಯ ಕೃಷ್ಣಾ , ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ಉಕ್ಕಿ ಹರಿಯುತ್ತಿದೆ.

ಈ ಹಿನ್ನೆಲೆ ಜಮಖಂಡಿ ಭಾಗದ ಸುಮಾರು ಹತ್ತಾರು ಹಳ್ಳಿಗಳಿಗೆ ಪ್ರವಾಹ ಆತಂಕ ಶುರುವಾಗಿದೆ. ಘಟಪ್ರಭಾ ನದಿಗೆ 53 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಿಲ್ಲೆಯ ಮುಧೋಳ, ರಬಕವಿ ಬನಹಟ್ಟಿ ತಾಲ್ಲೂಕುಗಳಲ್ಲಿ ಪ್ರವಾಹ ಭೀತಿ ಶುರುವಾಗಿದೆ.
ಹಾಗೇ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ.. ಬಾದಾಮಿ ತಾಲೂಕಿನ ನದಿದಡದ ಗೋವುನಕೊಪ್ಪ ಗ್ರಾಮದ ಕಿರು ಸೇತುವೆ ಮುಳುಗಡೆಯಾಗಿದ್ದು, ಪಕ್ಕದ ಗದಗ ಜಿಲ್ಲೆಯ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ನದಿದಡದ ಹೊಲಗದ್ದಗೆಗಳಿಗೆ ನುಗ್ಗಿದ ನೀರು, ಕಬ್ಬು, ಗೋವಿನಜೋಳ, ಜೋಳ, ಹೆಸರು ಬೆಳೆಗಳನ್ನ ಆಹುತಿ ಪಡೆದಿದೆ.
